ಗೊಂದಲದ ನಡುವೆಯೂ ಶೇ 64ರಷ್ಟು ಮತದಾನ

7
ಮತದಾರರ ಪಟ್ಟಿಯಿಂದ ಕೈಬಿಟ್ಟ ಹೆಸರು

ಗೊಂದಲದ ನಡುವೆಯೂ ಶೇ 64ರಷ್ಟು ಮತದಾನ

Published:
Updated:

ವಿಜಯಪುರ: ಮತ ಯಂತ್ರಗಳ ತಾಂತ್ರಿಕ ದೋಷ, ಸಮಯಕ್ಕೆ ಸರಿಯಾಗಿ ಆರಂಭಗೊಳ್ಳದ ಮತದಾನ ಪ್ರಕ್ರಿಯೆ, ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್‌ ಮಾಡಿರುವುದಕ್ಕೆ ಸಂಬಂಧಿಸಿದಂತೆ ವಿವಿಧೆಡೆಯ ಅಸ ಮಾಧಾನದ ನಡುವೆಯೂ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಶೇ 64ರಷ್ಟು ಮತದಾನ ನಡೆದಿದೆ.

ಜಿಲ್ಲೆಯ 2098 ಮತಗಟ್ಟೆಗಳಲ್ಲೂ ಬೆಳಿಗ್ಗೆ 7ಕ್ಕೆ ಮತದಾನ ಆರಂಭ ಗೊಂಡಿದೆ. ಆದರೆ ಕೆಲ ಮತಗಟ್ಟೆಗಳಲ್ಲಿ ಮತ ಯಂತ್ರದ ತಾಂತ್ರಿಕ ತೊಂದರೆ ಯಿಂದ ಒಂದರಿಂದ ಎರಡು ಗಂಟೆ ವಿಳಂಬವಾಗಿ ಮತದಾನ ಶುರು ವಾಗಿದೆ.

ಬೆಳಿಗ್ಗೆ 9 ಗಂಟೆ ವೇಳೆಗೆ ಶೇ 10 ಮತದಾನವಾಗಿದ್ದರೆ, 11 ಗಂಟೆಗೆ ಶೇ ಮಧ್ಯಾಹ್ನ 1 ಗಂಟೆಗೆ ಶೇ 37, 3 ಗಂಟೆಗೆ ಶೇ 48, ಸಂಜೆ 5 ಗಂಟೆ ವೇಳೆಗೆ ಶೇ 58 ಮತದಾನವಾಗಿದ್ದರೆ, ಮತದಾನದ ಅಂತಿಮ ಸಮಯ ಮುಸ್ಸಂಜೆ 6 ಗಂಟೆ ವೇಳೆಗೆ ಒಟ್ಟಾರೆ ಶೇ 64 ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾ ಆಯೋಗ ತಿಳಿಸಿದೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ 63 ಮತದಾನ ವಾಗಿದ್ದರೆ, ದೇವರ ಹಿಪ್ಪರಗಿ– ಶೇ 59 , ಬಸವನಬಾಗೇವಾಡಿ ಶೇ 70, ಬಬ ಲೇಶ್ವರ 75%, ವಿಜಯಪುರ ನಗರ 55%, ನಾಗಠಾಣ 62%, ಇಂಡಿ 64%, ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 63% ಮತದಾನವಾಗಿದೆ.

ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 75% ಮತದಾನ ವಾಗುವ ಮೂಲಕ ಅತ್ಯಂತ ಹೆಚ್ಚು ಮತದಾನವಾದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾದರೆ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ 55% ಮತದಾನವಾಗಿದೆ.

ಈ ಎರಡೂ ಕ್ಷೇತ್ರಗಳಲ್ಲಿ ಮತದಾ ನದ ಪ್ರಮಾಣ ಅಭ್ಯರ್ಥಿಗಳ ಗೆಲುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ರಾಜಕೀಯ ವಿಶ್ಲೇಷಣೆ ಮತದಾ ನದ ಶೇಕಡಾವಾರು ಪ್ರಕಟಗೊಂಡ ಬೆನ್ನಿಗೆ ನಡೆದಿದೆ.

ಮತದಾನ ಪ್ರಮಾಣ ಕಡಿಮೆ: 2013ರ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣ ಅವಲೋಕಿಸಿದರೆ, ಪ್ರಸ್ತುತ ಚುನಾವಣೆಯಲ್ಲಿ 2% ಮತದಾನ ಕಡಿ ಮೆಯಾಗಿದೆ ಎಂಬುದನ್ನು ಆಯೋಗದ ಅಂಕಿ–ಅಂಶಗಳು ದೃಢೀಕರಿಸುತ್ತವೆ.

2013ರ ಚುನಾವಣೆಯಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 65.93% ಮತದಾನವಾಗಿದ್ದರೆ, ದೇವರಹಿಪ್ಪರಗಿ–64.70 %, ಬಸವನಬಾಗೇವಾಡಿ 72.18%, ಬಬಲೇಶ್ವರ 73.03%, ವಿಜಯಪುರ ನಗರ 56.33%, ನಾಗಠಾಣ 62.18%, ಇಂಡಿ 69.20%, ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 69.47% ಮತದಾನವಾಗಿದ್ದು, ಒಟ್ಟಾರೆ 66.62% ಮತದಾನವಾಗಿತ್ತು.

2008ರ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣವನ್ನು ಪ್ರಸ್ತುತ ಚುನಾವಣೆಯ ಮತದಾನಕ್ಕೆ ಹೋಲಿಸಿ ಅವಲೋಕಿಸಿದಾಗ, 4% ಮತದಾನ ಈ ಬಾರಿ ಹೆಚ್ಚಳವಾಗಿದೆ.

2008ರ ಚುನಾವಣೆಯಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ 61.14% ಮತದಾನವಾಗಿದ್ದರೆ, ದೇವರಹಿಪ್ಪರಗಿ–61.53 %, ಬಸವನಬಾಗೇವಾಡಿ 64.75%, ಬಬಲೇಶ್ವರ 67.20%, ವಿಜಯಪುರ ನಗರ 48.71%, ನಾಗಠಾಣ 55.54%, ಇಂಡಿ 60.85%, ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 62.51% ಮತದಾನವಾಗಿದ್ದು, ಒಟ್ಟಾರೆ 60.65% ಮತದಾನವಾಗಿತ್ತು ಎಂಬುದನ್ನು ಚುನಾವಣಾ ಆಯೋ ಗದ ದಾಖಲೆಗಳು ದೃಢೀಕರಿಸುತ್ತವೆ.

**

ನನ್ನ ಕುಟುಂಬ ಸದಸ್ಯರೆಲ್ಲರ ಹೆಸರು ಮತದಾರರ ಪಟ್ಟಿ ಯಲ್ಲಿದೆ. ಆದರೆ ನನ್ನ ಹೆಸರು ಡಿಲಿಟ್‌ ಮಾಡಿದ್ದಾರೆ. ತಹಶೀಲ್ದಾರ್‌ ಪ್ರಶ್ನಿಸಿದರೂ ಪ್ರಯೋಜನವಾಗಲಿಲ್ಲ

– ಸಾಯಿಕುಮಾರ ಕೊಣ್ಣೂರಕರ, ಮತದಾರ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry