ರಹಾನೆಗೆ ದಂಡ

7

ರಹಾನೆಗೆ ದಂಡ

Published:
Updated:

ಮುಂಬೈ : ನಿಗದಿತ ಅವಧಿಯಲ್ಲಿ ತಂಡ ಬೌಲಿಂಗ್‌ ಪೂರ್ತಿಗೊಳಿಸದ ಕಾರಣ ರಾಜಸ್ಥಾನ್ ರಾಯಲ್ಸ್ ನಾಯಕ ಅಜಿಂಕ್ಯ ರಹಾನೆ ಅವರಿಗೆ ₹ 12 ಲಕ್ಷ ದಂಡ ವಿಧಿಸಲಾಗಿದೆ ಎಂದು ಐಪಿಎಲ್‌ ಆಡಳಿತದ ಪತ್ರಿಕಾ ಪ್ರಕಟಣೆ ತಿಳಿಸಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌, ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಎದುರು ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್‌ ಆರು ವಿಕೆಟ್‌ ಗಳಿಗೆ 168 ರನ್‌ ಗಳಿಸಿತ್ತು. ರಾಯಲ್ಸ್‌ 18 ಓವರ್‌ಗಳಲ್ಲಿ ಗುರಿ ಗುರಿ ಬೆನ್ನತ್ತಿತ್ತು.

‘ಐಪಿಎಲ್‌ನಲ್ಲಿ ತಂಡ ಇದೇ ಮೊದಲ ಬಾರಿ ಈ ತಪ್ಪು ಎಸಗಿದೆ. ಟೂರ್ನಿಯ ನಿಯಮಾವಳಿ ಪ್ರಕಾರ ತಂಡದ ನಾಯಕನಿಗೆ ದಂಡ ವಿಧಿಸ ಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry