ಗಾಳಿ, ಮಳೆ: ₹ 35 ಲಕ್ಷ ಹಾನಿ

7

ಗಾಳಿ, ಮಳೆ: ₹ 35 ಲಕ್ಷ ಹಾನಿ

Published:
Updated:
ಗಾಳಿ, ಮಳೆ: ₹ 35 ಲಕ್ಷ ಹಾನಿ

ಗೋಕಾಕ: ತಾಲ್ಲೂಕಿನ ಕೊಳವಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾನುವಾರ ತಡರಾತ್ರಿ ಬೀಸಿದ ಭಾರೀ ಗಾಳಿ ಮತ್ತು ಮಳೆಗೆ ಕೊಳವಿ ಗ್ರಾಮ ಹೊರವಲಯದಲ್ಲಿರುವ ಗೋಕಾಕ ಶುಗರ್‍ಸ್ ಕಾರ್ಖಾನೆಗೆ ಸೇರಿದ ಸಕ್ಕರೆ ಗೋದಾಮಿನ ಮೇಲ್ಛಾವಣಿ ಹಾರಿ ಹೋಗಿದ್ದರಿಂದ ಅಪಾರ ಹಾನಿ ಸಂಭವಿಸಿದೆ.

‘ಕಟ್ಟಡಕ್ಕೆ ಅಂದಾಜು ₹ 10 ಲಕ್ಷಕ್ಕೂ ಅಧಿಕ ಪ್ರಮಾಣದ ಹಾಗೂ ₹ 25 ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಕ್ಕರೆ ತುಂಬಿದ ಚೀಲಗಳಿಗೆ ಹಾನಿಯಾಗಿದೆ’ ಎಂದು ಕಾರ್ಖಾನೆಯ ಪ್ರಧಾನ ವ್ಯವಸ್ಥಾಪಕ ಸಂಜೀವ ತೇರದಾಳ ತಿಳಿಸಿದ್ದಾರೆ.

ಸಕ್ಕರೆ ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮರಗಳು ಸಹ ನೆಲಕ್ಕುರುಳಿವೆ ಎಂದು ಮೂಲಗಳು ತಿಳಿಸಿವೆ. ‘ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಕ್ಕರೆ ಕಾರ್ಖಾನೆ ಗೋದಾಮಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಹಾನಿಯಾಗಿದೆ ಎಂದು ಮೇಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ’ ಎಂದು ಕೊಳವಿ ಗ್ರಾಮ ಲೆಕ್ಕಾಧಿಕಾರಿ ಎಚ್.ಎಸ್.ಪಾಟೀಲ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry