ಯಾರಿಂದಲೂ ಊಹಿಸಲಾಗದಷ್ಟು ಬಹುಮತ ಸಾಬೀತುಪಡಿಸುತ್ತೇವೆ: ಶ್ರೀರಾಮುಲು

7

ಯಾರಿಂದಲೂ ಊಹಿಸಲಾಗದಷ್ಟು ಬಹುಮತ ಸಾಬೀತುಪಡಿಸುತ್ತೇವೆ: ಶ್ರೀರಾಮುಲು

Published:
Updated:
ಯಾರಿಂದಲೂ ಊಹಿಸಲಾಗದಷ್ಟು ಬಹುಮತ ಸಾಬೀತುಪಡಿಸುತ್ತೇವೆ: ಶ್ರೀರಾಮುಲು

ಬೆಂಗಳೂರು: ಬಿಜೆಪಿ ಈಗ ಸರ್ಕಾರ ರಚಿಸಿ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ಯಾರೂ ಊಹಿಸಲಾಗದಷ್ಟು ಸಂಖ್ಯೆಯಲ್ಲಿ ಬಹುಮತ ಸಾಬೀತು ಮಾಡಲಿದೆ ಎಂದು ಶಾಸಕ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ನಗರದಲ್ಲಿ ಸಿಎಂ ಪ್ರಮಾಣವಚನ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಅತ್ಯಂತ ವಿಶ್ವಾಸದಿಂದಲೇ ಮಾತನಾಡಿದ ಅವರು, ಸಿದ್ದರಾಮ್ಯಯ ಅವರು ಬೇರೆ ದಾರಿಯಲ್ಲಿ ಅಧಿಕಾರ ಹಿಡಿಯಲು ಹವಣಿಕೆ ಮಾಡುತ್ತಿದ್ದಾರೆ. ಸರ್ಕಾರ ಅಧಿಕಾರದಲ್ಲಿದ್ದಾಗ ಜನಪರವಾದ ಯಾವ ಕೆಲಸವನ್ನೂ ಅವರು ಮಾಡಿಲ್ಲ ಎಂದರು.

ಬಿಜೆಪಿ ಅಧಿಕಾರ ಮಾಡಲು ಜನ ಆದೇಶ ನೀಡಿದ್ದಾರೆ. ಅದರಂತೆ, ಯಡಿಯೂರಪ್ಪ ಅವರು ಇಂದು ಪ್ರಮಾಣವಚನ ಸ್ವೀರಿಸಿದ್ದಾರೆ. ನಾವು ಬಹುಮತ ಸಾಬೀತು ಮಾಡುತ್ತೇವೆ ಎಂದು ಹೇಳಿದರು.

104 ಸ್ಥಾನ ಇರುವ ನೀವು ಬಹುಮತವನ್ನು ಹೇಗೆ ಸಾಬೀತುಪಡಿಸುವಿರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶ್ರೀರಾಮುಲ, ಪಕ್ಷೇತರರು ಸಂಪರ್ಕದಲ್ಲಿದ್ದಾರೆ. ಬಹಳಷ್ಟು ಜನ ನಮ್ಮ ಜತೆ ಬರುತ್ತಾರೆ. ನಮ್ಮ ಜತೆಗೆ ನೀವು ಊಹಿಸಲೂ ಸಾಧ್ಯವಾಗದಷ್ಟು ಜನ ಬರುತ್ತಾರೆ ಮತ್ತು ಬಹುಮತವನ್ನೂ ನೀಡಲಿದ್ದಾರೆ. ಕಾದು ನೋಡಿ ಎಂದರು.

* ಇವನ್ನೂ ಓದಿ

* ದೇವರು, ರೈತರ ಹೆಸರಿನಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ

ಅಧಿಕಾರಿಗಳಿಂದ ಮಾಹಿತಿ ಪಡೆದು ಶೀಘ್ರದಲ್ಲೇ ಸಾಲ ಮನ್ನಾ: ಯಡಿಯೂರಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry