7

‘ವಾಚ್ ವ್ಯಕ್ತಿತ್ವದ ಪ್ರತಿಬಿಂಬ’

Published:
Updated:
‘ವಾಚ್ ವ್ಯಕ್ತಿತ್ವದ ಪ್ರತಿಬಿಂಬ’

‘ದಿನನಿತ್ಯದ ಬದುಕಿನಲ್ಲಿ ಶಿಸ್ತು ಕಾಪಾಡಿಕೊಳ್ಳಲು ಸಮಯಪಾಲನೆ ಮುಖ್ಯ. ಒತ್ತಡ ನಿಭಾಯಿಸುವಲ್ಲಿ ನೀವು ಕಟ್ಟುವ ವಾಚ್ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಯೋಚಿಸಿ ನೋಡಿ. ಈ ನಿಟ್ಟಿನಲ್ಲಿ ಹೇಳುವುದಾದರೆ ನಾನು ಕಟ್ಟುವ ವಾಚ್‌ಗಳು ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿ ಎಷ್ಟೋ ವರ್ಷಗಳಾಗಿವೆ’ - ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಮಾತುಗಳಿವು.

ನಗರದ ಮಂತ್ರಿ ಮಾಲ್‌ನಲ್ಲಿ ಪ್ರತಿಷ್ಠಿತ ‘ಟಿಸ್ಸೊ’ ವಾಚ್ ಕಂಪನಿಯ ನೂತನ ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಕೊಹ್ಲಿ ಅವರು ಟಿಸ್ಸೊ ವಾಚ್ ಕಂಪನಿಯ ಪ್ರಚಾರ ರಾಯಭಾರಿ. ಡ‘ಯಶಸ್ಸಿನ ಹಾದಿಗೆ ಕಟ್ಟುನಿಟ್ಟಾದ ಸಮಯ ಪಾಲನೆಯೇ ಕಾರಣ’ ಎಂದು ಹೇಳುವ ಕೊಹ್ಲಿ, ನೂತನ ಶೈಲಿಯ ವಾಚ್‌ಗಳನ್ನು ಸಂಗ್ರಹಿಸುವ ಹವ್ಯಾಸ ತನಗಿದೆ ಎಂದು ಹೇಳಿದ್ದಾರೆ.

‘ಮಾರುಕಟ್ಟೆಗೆ ಬರುವ ಹಲವು ವಾಚ್‌ಗಳನ್ನು ಹವ್ಯಾಸಕ್ಕಾಗಿ ನಾನು ಸಂಗ್ರಹಿಸುತ್ತೇನೆ. ಆದರೆ, ಕ್ಲಾಸಿಕಲ್ ಶೈಲಿಯ ಡಿಸೈನ್ ಹೊಂದಿರುವ ವಾಚ್‌ಗಳನ್ನೇ ನಾನು ಹೆಚ್ಚು ಬಳಸುವುದು. ಆದರೆ, ಅದರ ಡಿಸೈನ್ ಸಾಧ್ಯವಾದಷ್ಟು ಸರಳವಾಗಿರಬೇಕು. ವಾಚ್‌ಗೆ ಸಂಬಂಧಿಸಿದಂತೆ ಇದು ನಾನು ಅನುಸರಿಸುವ ಸ್ಟೈಲ್ ’ ಎಂದು ಹೇಳುತ್ತಾರೆ ಕೊಹ್ಲಿ.

‘ನಾವು ಆಯ್ಕೆ ಮಾಡಿಕೊಳ್ಳುವ ವಾಚ್‌ಗಳು ನಮ್ಮ ವ್ಯಕ್ತಿತ್ವದ ಪ್ರತಿಫಲನ. ಇದು ಕೇವಲ ವಾಚ್‌ಗಷ್ಟೇ ಸೀಮಿತವಾಗುವುದಿಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಆಯ್ಕೆಗಳಿರುತ್ತವೆ. ಅದಕ್ಕೆ ನಿರ್ದಿಷ್ಟ ಕಾರಣಗಳೂ ಇರುತ್ತವೆ. ವಾಚ್‌ನ ಬೆಲ್ಟ್, ಅದರ ಲೋಹದ ಹೊರ ಮೈ, ಗಡಿಯಾರದೊಳಗಿನ ಮುಳ್ಳುಗಳು....ಹೀಗೆ ಪ್ರತಿಯೊಂದರ ಸೌಂದರ್ಯವೂ ಭಿನ್ನ. ವಾಚ್ ಕಟ್ಟುವುದು ಕೇವಲ ಸಮಯಪಾಲನೆಗೆ ಅಲ್ಲ. ಆಧುನಿಕ ಜಗತ್ತಿನಲ್ಲಿ ವಾಚ್ ಕೂಡ ನಿಮ್ಮ ಸ್ಟೈಲ್‌ನ ಪರಿಕಲ್ಪನೆಯ ಭಾಗ’ ಎಂಬುದು ಕೊಹ್ಲಿ ಅಭಿಪ್ರಾಯ.

‘ಟಿಸ್ಸೊ ಕಂಪನಿಯ ‘ಪವರ್ ಮ್ಯಾಟಿಕ್’ ಮಾಡೆಲ್ ನನ್ನ ಇಷ್ಟದ ವಾಚ್. ಕ್ಲಾಸಿಕಲ್ ಶೈಲಿಯಿಂದ ಹಿಡಿದು ಇಂದಿನ ಯುವಜನರು ಇಷ್ಟಪಡುವ ಎಲ್ಲ ರೀತಿಯ ಭಿನ್ನ ವಾಚ್ ಗಳನ್ನು ಟಿಸ್ಸೊ ಮಾರುಕಟ್ಟೆಗೆ ತರುತ್ತಿದೆ. ಟಿಸ್ಸೊದ ಟಚ್ ಸಂಗ್ರಹ, ಟಿ-ಸ್ಪೋರ್ಟ್, ಟಿ-ಲೇಡಿ, ಟಿ-ಕ್ಲಾಸಿಕ್, ಟಿ-ಗೋಲ್ಡ್ ಇನ್ನೂ ಮುಂತಾದ ವಾಚ್‌ಗಳು ವಿಶೇಷ ಸೌಂದರ್ಯದಿಂದ ಮನಸೂರೆಗೊಳ್ಳುತ್ತವೆ’ ಎಂದು ಅವರು ಹೇಳುತ್ತಾರೆ.

ಕೈ ಗಡಿಯಾರದ ಮೇಲಿನ ನಮ್ಮ ಪ್ರೀತಿಯನ್ನು ಕೇವಲ ಸ್ಟೈಲ್ ದೃಷ್ಟಿಯಿಂದಷ್ಟೇ ಅಭಿವ್ಯಕ್ತಿಸುವುದು ಸರಿಯಲ್ಲ ಎನ್ನುವ ಅವರು, ಅವು ಶಿಸ್ತುಪಾಲನೆ ಹಾಗೂ ವ್ಯಕ್ತಿತ್ವದ ಮಧ್ಯೆ ಸೇತುವೆಯಾಗಬೇಕು ಎಂದು ಅಭಿಪ್ರಾಯಪಡುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry