‘ಭಾರತ್‌’ನಲ್ಲಿ ತಬು

7

‘ಭಾರತ್‌’ನಲ್ಲಿ ತಬು

Published:
Updated:
‘ಭಾರತ್‌’ನಲ್ಲಿ ತಬು

ಸಲ್ಮಾನ್‌ ಖಾನ್‌, ಪ್ರಿಯಾಂಕಾ ಚೋಪ್ರಾ ನಟನೆಯ ‘ಭಾರತ್‌’ ಸಿನಿಮಾದಲ್ಲಿ ನಟಿ ತಬು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ಆಲಿ ಅಬ್ಬಾಸ್‌ ಜಾಫರ್‌ ಅವರ ‘ಭಾರತ್‌’ ಸಿನಿಮಾ ಬಹುದಿನಗಳಿಂದ ಸುದ್ದಿಯಲ್ಲಿದೆ. ಈ ಮೊದಲು ಚಿತ್ರದ ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ಆಯ್ಕೆ, ಅದಾದ ಬಳಿಕ ಈ ಚಿತ್ರದಲ್ಲಿ ದಿಶಾ ಪಟಾನಿಯೂ ನಟಿಸಿಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಈಗ ಅನೇಕ ವರ್ಷಗಳ ನಂತರ ನಟಿ ತಬು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಆಲಿ ಅಬ್ಬಾಸ್‌ ಅವರು ತಬು ಅವರು ಈ ಚಿತ್ರದಲ್ಲಿ ನಟಿಸಿಲಿದ್ದಾರೆ ಎಂಬ ಸುದ್ದಿಯನ್ನು ಟ್ವಿಟ್ಟರ್‌ನಲ್ಲಿ ಪ್ರಕಟಿಸಿದ್ದಾರೆ. ‘ಕೊನೆಗೂ ಇದು ನೆರವೇರಿದೆ. ನಿಮ್ಮ ಜೊತೆಗೆ ಕೆಲಸ ಮಾಡಲು ತುಂಬ ಉತ್ಸುಕನಾಗಿದ್ದೇನೆ. ತುಂಬು ಪ್ರೀತಿಯಿಂದ, ತಬು’ ಎಂದು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ ಸಲ್ಮಾನ್‌ ಖಾನ್‌ ಹಾಗೂ ತಬು ‘ಹಮ್‌ ಸಾಥ್‌ ಸಾಥ್‌ ಹೈ’, ಜೈ ಹೋ’ ಹಾಗೂ ಇನ್ನಿತರ ಚಿತ್ರಗಳಲ್ಲಿ ಜೋಡಿಯಾಗಿ ನಟಿಸಿದ್ದರು. ಈಗ ಭಾರತ್‌ ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ನಟಿಸಿಲಿರುವ ತಬು ವಿದೇಶದಿಂದ ಹಿಂತಿರುಗಲಿದ್ದಾರೆ ಎಂಬ ಸುದ್ದಿ ಹರಡಿವೆ. ಈ ಚಿತ್ರ 2019ರ ಈದ್‌ ಹಬ್ಬದಂದು ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry