ಹುಂಡೈನ ಸುಧಾರಿತ ಕ್ರೀಟಾ ಮಾರುಕಟ್ಟೆಗೆ

7

ಹುಂಡೈನ ಸುಧಾರಿತ ಕ್ರೀಟಾ ಮಾರುಕಟ್ಟೆಗೆ

Published:
Updated:

ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಕಂಪನಿಯು ದೇಶಿ ಮಾರುಕಟ್ಟೆಗೆ ಸುಧಾರಿತ ಆವೃತ್ತಿಯ ಎಸ್‌ಯುವಿ ಕ್ರೀಟಾ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಪೆಟ್ರೋಲ್ ಮಾದರಿಯ ಬೆಲೆಯು ₹ 9.43 ಲಕ್ಷದಿಂದ ₹ 13.59  ಲಕ್ಷದವರೆಗೆ (ಎಕ್ಸ್ ಷೋರೂಂ ಬೆಲೆ) ಹಾಗೂ ಡೀಸೆಲ್‌ ಮಾದರಿ ₹ 9.99 ಲಕ್ಷದಿಂದ ₹ 15.03 ಲಕ್ಷದವರೆಗಿದೆ.

ಎಲೆಕ್ಟ್ರಿಕ್‌ ಸನ್‌ರೂಫ್‌, 6 ವೇ ಪವರ್‌ ಡ್ರೈವರ್ ಸೀಟ್‌, ವೈರ್‌ಲೆಸ್‌ ಚಾರ್ಜರ್‌ ತರಹದ ಇನ್ನೂ ಹಲವು ಹೆಚ್ಚುವರಿ ಸೌಲಭ್ಯಗಳನ್ನು ಒಳಗೊಂಡಿದೆ.

‘2015ರಲ್ಲಿ ಕ್ರೀಟಾ ಬಿಡುಗಡೆ ಮಾಡುವ ಮೂಲಕ ಎಸ್‌ಯುವಿ ವಿಭಾಗದಲ್ಲಿ ಮೊದಲ ಬ್ರ್ಯಾಂಡ್‌ ಸ್ಥಾಪಿಸಲಾಯಿತು. ಈ ವಿಭಾಗದಲ್ಲಿ ಹೊಸ ಕ್ರೀಟಾ ಹೊಸ ಮೈಲುಗಲ್ಲು ಸೃಷ್ಟಿಸುವ ವಿಶ್ವಾಸವಿದೆ’ ಎಂದು ಕಂಪನಿಯ ಸಿಇಒ ವೈ.ಕೆ. ಕೋ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry