ನಾಕ್‌ಔಟ್‌ ಹಂತಕ್ಕೆ ತಲುಪಲು ವಿಫಲ, ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ: ಕೊಹ್ಲಿ ಟ್ವೀಟ್‌

7

ನಾಕ್‌ಔಟ್‌ ಹಂತಕ್ಕೆ ತಲುಪಲು ವಿಫಲ, ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ: ಕೊಹ್ಲಿ ಟ್ವೀಟ್‌

Published:
Updated:
ನಾಕ್‌ಔಟ್‌ ಹಂತಕ್ಕೆ ತಲುಪಲು ವಿಫಲ, ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ: ಕೊಹ್ಲಿ ಟ್ವೀಟ್‌

ನವದೆಹಲಿ: ‘ಈ ಸಲದ ಐಪಿಎಲ್‌ ಆವೃತ್ತಿಯಲ್ಲಿ ಉತ್ತಮ ಸಾಧನೆ ತೋರಲಿಲ್ಲ. ನಾಕ್‌ಔಟ್‌ ಹಂತಕ್ಕೆ ತಲುಪಲು ವಿಫಲವಾಗಿದ್ದಕ್ಕೆ ಅಭಿಮಾನಿಗಳಲ್ಲಿ ಕ್ಷಮೆ ಕೋರುತ್ತೇನೆ’ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್‌ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

’ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಟ ಆಡಲು ಸಾಧ್ಯವಾಗಲಿಲ್ಲ. ಅಭಿಮಾನಿಗಳ ನಿರೀಕ್ಷೆ ಹುಸಿಗೊಳಿಸಿದ್ದಕ್ಕೆ ಬೇಸರವಿದೆ. ನಮ್ಮ ತಂಡದ ಆಟ ನನಗೆ ತೃಪ್ತಿ ತಂದಿಲ್ಲ’ ಎಂದು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹೇಳಿದ್ದಾರೆ.

‘ಆದರೆ, ಆಟದಲ್ಲಿ ಗೆಲುವು–ಸೋಲು ಇರುವುದು ಸಹಜ. ಮುಂದಿನ ಐಪಿಎಲ್‌ ಆವೃತ್ತಿಯಲ್ಲಿ ಉತ್ತಮ ಸಾಧನೆ ತೋರುವುದು ಅಗತ್ಯ. ಈ ನಿಟ್ಟಿನಲ್ಲಿ ಎದುರಾಳಿಗಳ ಸವಾಲು ಮೀರಲು ಹೆಚ್ಚಿನ ಪ್ರಯತ್ನ ಮಾಡಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿಯು 14 ಪಂದ್ಯಗಳಲ್ಲಿ 6ರಲ್ಲಿ ಜಯಿಸಿ ಪಾಯಿಂಟ್‌ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.  ಕೊಹ್ಲಿ ಅವರು ಒಟ್ಟು 14 ಪಂದ್ಯಗಳಲ್ಲಿ 530 ರನ್‌ ಕಲೆಹಾಕಿದ್ದರು. ಆರ್‌ಸಿಬಿಯ ಮತ್ತೊಬ್ಬ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಅವರು 480 ರನ್‌ ಗಳಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry