7

ತೆಲುಗು ನಟಿ ಶ್ರೀರೆಡ್ಡಿ, ಅಭಿರಾಮ್‌ ದಗ್ಗುಬಾಟಿ ಖಾಸಗಿ ಪೋಟೊಗಳು ವೈರಲ್‌

Published:
Updated:
ತೆಲುಗು ನಟಿ ಶ್ರೀರೆಡ್ಡಿ, ಅಭಿರಾಮ್‌ ದಗ್ಗುಬಾಟಿ ಖಾಸಗಿ ಪೋಟೊಗಳು ವೈರಲ್‌

ಬೆಂಗಳೂರು: ಕ್ಯಾಸ್ಟಿಂಗ್ ಕೌಚ್ ವಿರುದ್ಧ ದನಿ ಎತ್ತಿ, ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದ ತೆಲುಗು ನಟಿ ಶ್ರೀರೆಡ್ಡಿ ಇದೀಗ ನಟ ರಾಣಾ ದಗ್ಗುಬಾಟಿ ಸಹೋದರನ ಜೊತೆಗಿರುವ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.

ತೆಲುಗು ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ವಿರೋಧಿಸಿ, ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಶ್ರೀರೆಡ್ಡಿ ಅರೆನಗ್ನಳಾಗಿ ಪ್ರತಿಭಟನೆ ನಡೆಸಿದ್ದರು. ಈ ಬೆಳವಣಿಗೆ ದೇಶದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಚಿತ್ರರಂಗದಲ್ಲಿ ನಟಿಯರನ್ನು ದೈಹಿಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದರು.

ಕೆಲ ದಿನವುಗಳ ಹಿಂದಷ್ಟೇ ನನ್ನನ್ನು ತೆಲುಗು ಸಿನಿಮಾದ ಜನಪ್ರಿಯ ನಿರ್ಮಾಪಕರ ಪುತ್ರನೊಬ್ಬ ದೈಹಿಕ ಬಳಸಿಕೊಂಡಿದ್ದಾನೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪುರಾವೆ ಏನು ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇದೀಗ ಪ್ರಶ್ನೆ ಮಾಡಿದವರಿಗೆ ಉತ್ತರ ಕೊಟ್ಟಿರುವ ಶ್ರೀರೆಡ್ಡಿ  ಅವರು ನಟ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್‌ ದಗ್ಗುಬಾಟಿ ಜೊತೆಗಿರುವ 35 ಖಾಸಗಿ ಪೋಟೊಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಬುಧವಾರ ಮಧ್ಯಾಹ್ನ 2 ಗಂಟೆಗೆ ಶ್ರೀರೆಡ್ಡಿ ಈ ಫೋಟೊಗಳನ್ನು ಪ್ರಕಟಿಸಿದ್ದಾರೆ. ಅಭಿರಾಮ್‌ ಪದೇ ಪದೇ ನನ್ನನ್ನು ಸ್ಟುಡಿಯೋಗೆ ಕರೆಸಿಕೊಂಡು ದೈಹಿಕವಾಗಿ ಬಳಸಿಕೊಂಡು ಮೋಸ ಮಾಡಿದ್ದಾನೆ ಎಂದು ಅವರು ಆರೋಪ ಮಾಡಿದ್ದಾರೆ.

ಶ್ರೀರೆಡ್ಡಿ ಪ್ರಕಟಿಸಿರುವ ಕೆಲವು ಪೋಟೊಗಳಿಗೆ ’ಅಭಿ ದಗ್ಗು’ ಎಂದು ಶೀರ್ಷಿಕೆ ನೀಡಿದ್ದಾರೆ. ಇನ್ನು ಕೆಲವು ಚಿತ್ರಗಳಿಗೆ ನನ್ನ ಜೀವನದ ವಿಲನ್‌ ಎಂಬ ಅಡಿ ಬರಹವನ್ನು ಬರೆದಿದ್ದಾರೆ.

ಶ್ರೀರೆಡ್ಡಿ ಪ್ರಕಟಿಸಿರುವ ಪೋಸ್ಟ್‌ಗಳಿಂದ ತೆಲುಗು ಚಿತ್ರರಂಗದಲ್ಲಿ ಹೊಸ ಸಂಚಲನ ಉಂಟಾಗಿದೆ. ಈ ಬಗ್ಗೆ ತೆಲುಗು ಚಿತ್ರರಂಗದವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಈ ಚಿತ್ರಗಳಿಗೆ ಸಂಬಂಧಿಸಿದಂತೆ ಅಭಿರಾಮ್‌ ದುಗ್ಗುಬಾಟಿ ಹಾಗೂ ರಾಣಾ ದಗ್ಗುಬಾಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry