ಈಗಲೂ ಇಲ್ಲ ಸರ್ವರಿಗೂ ಆರೋಗ್ಯ ಭಾಗ್ಯ !

7
195 ದೇಶಗಳ ಆರೋಗ್ಯ ಸೇವೆ ಲಭ್ಯತೆ ಮತ್ತು ಗುಣಮಟ್ಟ ಸೂಚ್ಯಂಕದಲ್ಲಿ ಭಾರತಕ್ಕೆ 145ನೇ ಸ್ಥಾನ

ಈಗಲೂ ಇಲ್ಲ ಸರ್ವರಿಗೂ ಆರೋಗ್ಯ ಭಾಗ್ಯ !

Published:
Updated:
ಈಗಲೂ ಇಲ್ಲ ಸರ್ವರಿಗೂ ಆರೋಗ್ಯ ಭಾಗ್ಯ !

ಜಾಗತಿಕ ಆರೋಗ್ಯ ಸೇವೆ ಲಭ್ಯತೆ ಮತ್ತು ಗುಣಮಟ್ಟ ಸೂಚ್ಯಂಕದಲ್ಲಿ ಭಾರತವು 145ನೇ ಸ್ಥಾನದಲ್ಲಿದೆ. 1990ರ ಪರಿಸ್ಥಿತಿಗೆ ಹೋಲಿಸಿದರೆ 2016ರಲ್ಲಿ ಭಾರತದಲ್ಲಿ ಆರೋಗ್ಯ ಸೇವೆ ಲಭ್ಯತೆ ಮತ್ತು ಗುಣಮಟ್ಟ ಎರಡೂ ಸುಧಾರಿಸಿದೆ.

ಆದರೆ ನೆರೆಯ ಕೆಲವು ದೇಶಗಳಲ್ಲಿ ಪರಿಸ್ಥಿತಿ ಭಾರತಕ್ಕಿಂತ ಉತ್ತಮವಾಗಿದೆ ಎಂದು ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ’ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ. ಅಗತ್ಯ ಚಿಕಿತ್ಸೆಯನ್ನು ನೀಡಿ ಸಾವನ್ನು ತಪ್ಪಿಸಬಹುದಾಗಿದ್ದ ಪ್ರಕರಣಗಳನ್ನು ಲೆಕ್ಕಹಾಕಿ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ

**

ಭಾರತ ಮತ್ತು ನೆರೆದೇಶಗಳ ಸ್ಥಾನ

ಚೀನಾ 48

ಶ್ರೀಲಂಕಾ 71

ಬಾಂಗ್ಲಾದೇಶ 133

ಭೂತಾನ್ 134

ಭಾರತ 145

ನೇಪಾಳ 149

ಪಾಕಿಸ್ತಾನ 154

ಅಫ್ಗಾನಿಸ್ತಾನ 191

(195 ಅಧ್ಯಯನಕ್ಕೆ ಒಳಪಡಿಸಿದ್ದ ದೇಶಗಳು)

**

ಸಾಂಕ್ರಾಮಿಕವಲ್ಲದ ರೋಗಗಳದ್ದೇ ಸಮಸ್ಯೆ

ಈ 26 ವರ್ಷಗಳ ಅವಧಿಯಲ್ಲಿ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸುವಲ್ಲಿ ಭಾರತವು ಸಫಲವಾಗಿದೆ. ಆದರೆ ಸಾಂಕ್ರಾಮಿಕವಲ್ಲದ ರೋಗಗಳು ಮತ್ತು ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ. ಹೆಚ್ಚಿನ ಅಕಾಲಿಕ ಮರಣಗಳಿಗೆ ಕಾರಣವಾಗುತ್ತಿರುವ ಕೆಲವು ಕಾಯಿಲೆಗಳು ಈ ಮುಂದಿನಂತಿವೆ

ಮಧುಮೇಹ

ಕ್ಷಯ

ಹೃದ್ರೋಗಗಳು

ಪಾರ್ಶ್ವವಾಯು

ಕ್ಯಾನ್ಸರ್‌

ಕಿಡ್ನಿ ಸಂಬಂಧಿ ಕಾಯಿಲೆಗಳು

ಅಕಾಲಿಕ ಮರಣ: ಕಾರಣಗಳಲ್ಲಿ ಭಾರಿ ಬದಲಾವಣೆ

1990

60 % ಸಾಂಕ್ರಾಮಿಕ ರೋಗಗಳು

31 % ಸಾಂಕ್ರಾಮಿಕವಲ್ಲದ ರೋಗಗಳು

9 %  ಅಪಘಾತ–ಅವಘಡಗಳಿಂದಾದ ಗಾಯಗಳು

2016

33 % ಸಾಂಕ್ರಾಮಿಕ ರೋಗಗಳು

55 % ಸಾಂಕ್ರಾಮಿಕವಲ್ಲದ ರೋಗಗಳು

12 % ಅಪಘಾತ–ಅವಘಡಗಳಿಂದಾದ ಗಾಯಗಳು

ಆಧಾರ: ಪಿಟಿಐ, ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ 2016 ವರದಿ, ಜಾಗತಿಕ ಆರೋಗ್ಯ ಸೇವೆ ಮತ್ತು ಗುಣಮಟ್ಟ ಸೂಚ್ಯಂಕ ವರದಿ –2016

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry