ಷೇರುಪೇಟೆ: ಸಂವೇದಿ ಸೂಚ್ಯಂಕ 319 ಅಂಶ ಏರಿಕೆ

7

ಷೇರುಪೇಟೆ: ಸಂವೇದಿ ಸೂಚ್ಯಂಕ 319 ಅಂಶ ಏರಿಕೆ

Published:
Updated:
ಷೇರುಪೇಟೆ: ಸಂವೇದಿ ಸೂಚ್ಯಂಕ 319 ಅಂಶ ಏರಿಕೆ

ಮುಂಬೈ: ದೇಶಿ ಸಾಂಸ್ಥಿಕ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯಿಂದ ಷೇರುಪೇಟೆಗಳ ವಹಿವಾಟು ಗುರುವಾರ ಚೇತರಿಕೆ ಹಾದಿಗೆ ಮರಳಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 319 ಅಂಶ ಏರಿಕೆ ಕಂಡು 34,663 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ಏಪ್ರಿಲ್‌ 5 ರ ನಂತರ ದಿನದ ವಹಿವಾಟಿನಲ್ಲಿ ಸೂಚ್ಯಂಕದ ಅತ್ಯಂತ ಗರಿಷ್ಠ ಏರಿಕೆ ಇದಾಗಿದೆ. ಅಂದು 578 ಅಂಶಗಳಷ್ಟು ಜಿಗಿತ ಕಂಡಿತ್ತು. ಮಾರಾಟದ ಒತ್ತಡಕ್ಕೆ ಸಿಲುಕಿ ಬುಧವಾರ 306 ಅಂಶ ಇಳಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 80 ಅಂಶಗಳ ಏರಿಕೆಯೊಂದಿಗೆ 10,514 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry