ಹೊಸದುರ್ಗ: ಕುರಿ ಖರೀದಿಯ ಭರಾಟೆ

7
ಮೂರು ತಿಂಗಳ ಮರಿಗೆ ₹ 3 ಸಾವಿರ

ಹೊಸದುರ್ಗ: ಕುರಿ ಖರೀದಿಯ ಭರಾಟೆ

Published:
Updated:
ಹೊಸದುರ್ಗ: ಕುರಿ ಖರೀದಿಯ ಭರಾಟೆ

ಹೊಸದುರ್ಗ: ಪಟ್ಟಣದಲ್ಲಿ ಸಾಕು ಕುರಿಮರಿಗಳಿಗೆ ಭಾರಿ ಬೇಡಿಕೆ ಬಂದಿದ್ದು, ದರ ಏರಿಕೆಯಾಗಿದೆ. ‘ಈ ಭಾಗದಲ್ಲಿ ಬಹುತೇಕ ರೈತರು ಕುರಿಮರಿ ಸಾಕುತ್ತಾರೆ. ಈ ವಾರದ ಸಂತೆಯಲ್ಲಿ ಕುರಿಮರಿ ಖರೀದಿಸುವವರ ಸಂಖ್ಯೆ ಹೆಚ್ಚಾಗಿರುವುದರಿಂದ ದರ ಏರಿಕೆಯಾಗಿದೆ’ ಎನ್ನುತ್ತಾರೆ ಅತ್ತಿಘಟ್ಟದ ಮಲ್ಲಪ್ಪ.

‘ತಾಲ್ಲೂಕು ಸೇರಿದಂತೆ ನೆರೆಯ ತಾಲ್ಲೂಕು, ಜಿಲ್ಲೆಗಳಿಂದಲೂ ಕುರಿಮರಿ ಮಾರಾಟ ಹಾಗೂ ಖರೀದಿದಾರರು ಇಲ್ಲಿಗೆ ಬರುತ್ತಾರೆ. ಕಳೆದ ವಾರ ಮೂರು ತಿಂಗಳ ಕುರಿ ಮರಿಯನ್ನು ₹2,500ರಿಂದ ₹2,800ಕ್ಕೆ ಖರೀದಿಸಬಹುದಿತ್ತು. ಆದರೆ ಈ ವಾರ ಅದೇ ಮೂರು ತಿಂಗಳ ಕುರಿ ಮರಿ ದರ ₹ 500ರಷ್ಟು ಏರಿಕೆಯಾಗಿದೆ. ಬೆಲೆ ಹೆಚ್ಚಾಗಿದ್ದರೂ ಖರೀದಿಸುವವರೇನೂ ಕಡಿಮೆಯಾಗಿಲ್ಲ. ಒಳ್ಳೆಯ ಜಾಪು(ನೀಳವಾಗಿ) ಇರುವ 4 ತಿಂಗಳ ಮರಿಗಳನ್ನು ₹4,000ದಿಂದ ₹4,300ರ ವರೆಗೂ ಮುಗಿಬಿದ್ದು ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಬಲ್ಲಾಳಸಮುದ್ರದ ರಂಗನಾಥ್‌.

‘₹6,300ಕ್ಕೆ ಎರಡು ಕುರಿ ಮರಿ ಖರೀದಿಸಿದ್ದೇನೆ. ಈ ಕುರಿ ಮರಿ ಸಾಕಲು ಪ್ರತ್ಯೇಕ ಸಮಯ ಮತ್ತು ಶ್ರಮವೇನು ಬೇಕಾಗಿಲ್ಲ. ಕೃಷಿ ಕೆಲಸಕ್ಕೆ ಬೆಳಿಗ್ಗೆ ಹೋಗುವಾಗ ಜತೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ಕುರಿ ಮರಿಗಳು ಜಮೀನಿನಲ್ಲಿಯೇ ಇರುವ ಹಸಿರು ಹುಲ್ಲು ತಿನ್ನುತ್ತವೆ. ಎರಡು ಕುರಿ ಮರಿಯನ್ನು ಮೂರು ತಿಂಗಳು ಚೆನ್ನಾಗಿ ಸಾಕಿದರೆ ₹12,000ದ ವರೆಗೂ ಮಾರಾಟ ಮಾಡಬಹುದು’ ಎನ್ನುತ್ತಾರೆ ರೈತ ತಿಮ್ಮಣ್ಣ.

ಉತ್ತಮ ಆದಾಯ

₹ 3,000 ಕೊಟ್ಟು ಖರೀದಿಸಿದ ಒಂದು ಕುರಿಮರಿಯನ್ನು ಐದಾರು ತಿಂಗಳು  ಸಾಕಿದ ನಂತರ, ₹10,000ಕ್ಕಿಂತ ಅಧಿಕ ದರಕ್ಕೆ ಮಾರಾಟ ಮಾಡುತ್ತೇನೆ. ಇದರಿಂದ ಉತ್ತಮ ಆದಾಯ ಬರುತ್ತದೆ’ ಎನ್ನುತ್ತಾರೆ ಶ್ರೀರಾಂಪುರ ರೈತ ಬಸವರಾಜು.

**

ಖರೀದಿಸಿದ ಮೂರು ತಿಂಗಳ ಎಳೆ ಕುರಿಮರಿಯನ್ನು ಮುತುವರ್ಜಿಯಿಂದ ಸರಿಯಾಗಿ ಸಾಕದೆ ಯಾವುದಾದರೂ ರೋಗಕ್ಕೆ ತುತ್ತಾದರೆ ನಷ್ಟ ಉಂಟಾಗುತ್ತದೆ

- ಹನುಮಂತಪ್ಪ, ಕುರಿಗಾಹಿ 

– ಎಸ್‌.ಸುರೇಶ್‌ ನೀರಗುಂದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry