ರೇಷ್ಮೆ ಹುಳುಗಳ ಕೊಠಡಿಗೆ ನುಗ್ಗಿದ್ದ ಚಿರತೆ ಸೆರೆ

7

ರೇಷ್ಮೆ ಹುಳುಗಳ ಕೊಠಡಿಗೆ ನುಗ್ಗಿದ್ದ ಚಿರತೆ ಸೆರೆ

Published:
Updated:
ರೇಷ್ಮೆ ಹುಳುಗಳ ಕೊಠಡಿಗೆ ನುಗ್ಗಿದ್ದ ಚಿರತೆ ಸೆರೆ

ರಾಮನಗರ: ಕನಕಪುರ ತಾಲ್ಲೂಕಿನ ಬೇಲಿ ಕೊತ್ತನೂರು ಗ್ರಾಮದ ರೇಷ್ಮೆ ಹುಳು ಸಾಕಾಣಿಕೆ ಕೊಠಡಿಗೆ ಹೊಕ್ಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಶನಿವಾರ ಮುಂಜಾನೆ ಆಹಾರ ಹುಡುಕುತ್ತ ಮನೆಗೆ ನುಗ್ಗಿದ ಚಿರತೆ ಕೊಠಡಿಯಲ್ಲಿದ್ದ ತಮ್ಮಯ್ಯ ಎಂಬುವರ ಮೇಲೆ ದಾಳಿ ನಡೆಸಿತು. ಈ ಸಂದರ್ಭ ಮನೆಯಲ್ಲಿದ್ದ ಜಗದೀಶ ಎಂಬುವರು ನೆರವಿಗೆ ಧಾವಿಸಿದರು. ಬಳಿಕ ಚಿರತೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿದ್ದರು.

ಗಾಯಾಳು ತಮ್ಮಯ್ಯ ಅವರನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿರತೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ರವಾನಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry