ನಾನು ನಿರ್ದೋಷಿ: ಸಂಜಿತಾ ಚಾನು

7
ಐಡಬ್ಲ್ಯುಎಫ್‌ ನಿರ್ಧಾರಕ್ಕೆ ವಿರೋಧ

ನಾನು ನಿರ್ದೋಷಿ: ಸಂಜಿತಾ ಚಾನು

Published:
Updated:
ನಾನು ನಿರ್ದೋಷಿ: ಸಂಜಿತಾ ಚಾನು

ನವದೆಹಲಿ: ‘ನಾನು ನಿರ್ದೋಷಿ. ನಿಷೇಧಿತ ಉದ್ದೀಪನ ಮದ್ದು ಸೇವಿಸಿಲ್ಲ.  ನನ್ನ ಮೇಲೆ ಹೇರಿ ರುವ ತಾತ್ಕಾಲಿಕ ಅಮಾನತು ವಿರುದ್ಧ ಭಾರತ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ನ ನೆರವಿನೊಂದಿಗೆ ಮೇಲ್ಮನವಿ ಅರ್ಜಿ ಸಲ್ಲಿಸುತ್ತೇನೆ’ ಎಂದು ಭಾರತದ ವೇಟ್‌ ಲಿಫ್ಟರ್‌ ಸಂಜಿತಾ ಚಾನು ಹೇಳಿದ್ದಾರೆ.

ಸಂಜಿತಾ ಅವರು ಉದ್ದೀಪನ ಮದ್ದು ಸೇವಿಸಿರುವುದು ಗುರುವಾರ ಧೃಡಪಟ್ಟಿತ್ತು. ಅವರು ಟೆಸ್ಟೋಸ್ಟೆರಾನ್‌ (ಅನಾಬೊಲಿಕ್‌) ಸೇವಿಸಿರುವುದು ಪತ್ತೆಯಾಗಿತ್ತು. ಇದರಿಂದಾಗಿ ಅಂತರರಾಷ್ಟ್ರೀಯ ವೇಟ್‌ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಫ್‌) ಸಂಜಿತಾ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿತ್ತು.

ಐಡಬ್ಲ್ಯುಎಫ್‌ನ ನಿರ್ಧಾರವನ್ನು ವಿರೋಧಿಸಿದ್ದ ಇಂಡಿಯನ್‌ ವೇಟ್‌ ಲಿಫ್ಟಿಂಗ್‌ ಫೆಡರೇಷನ್‌ (ಐಡಬ್ಲ್ಯುಎಲ್‌ಎಫ್‌) , ‘2017ರಲ್ಲಿ ನಡೆಸಿದ್ದ ಪರೀಕ್ಷೆಯ ವರದಿಯನ್ನು ಈಗ ಬಹಿರಂಗಪಡಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತದೆ’ ಎಂದು ಹೇಳಿತ್ತು.

‘ಪರೀಕ್ಷೆಯ ವರದಿಯನ್ನು ಸುಮಾರು ಆರು ತಿಂಗಳ ನಂತರ ಏಕೆ ಬಿಡುಗಡೆ ಮಾಡಲಾಗಿದೆ ಎಂಬುದೇ ಗೊತ್ತಾಗುತ್ತಿಲ್ಲ. ಪರೀಕ್ಷೆಯ ನಂತರ ಸಂಜಿತಾ ಅವರು ವಿಶ್ವ ಚಾಂಪಿಯನ್‌ಷಿಪ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಗ ಳಲ್ಲಿ ಸ್ಪರ್ಧಿಸಿದ್ದರು. ಅವರ ಮೇಲಿನ ಅಮಾನತು ಶಿಕ್ಷೆಯನ್ನು ಪ್ರಶ್ನಿಸುತ್ತೇವೆ’ ಎಂದು ಐಡಬ್ಲ್ಯುಎಲ್‌ಎಫ್‌ನ ಪ್ರಧಾನ ಕಾರ್ಯದರ್ಶಿ ಸಹದೇವ್‌ ಯಾದವ್‌ ಹೇಳಿದ್ದಾರೆ.

‘ಎರಡನೇ ಪರೀಕ್ಷೆಯ ವರದಿ ಬರು ವವರೆಗೂ ಕಾಯುತ್ತೇವೆ. ಸಂಜಿತಾ, ಯಾವುದೇ ರೀತಿಯ ನಿಷೇಧಿತ ಉದ್ದೀಪನ ಮದ್ದು ಸೇವಿಸಿಲ್ಲ ಎಂಬ ವಿಶ್ವಾಸವಿದೆ. ಈ ಪ್ರಕರಣದಲ್ಲಿ ಅವರು ನಿರ್ದೋಷಿಯಾಗಿ ಹೊರಬರಲಿದ್ದಾರೆ’ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದೇವೆ.

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ಇತ್ತೀಚೆಗೆ ನಡೆದಿದ್ದ ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಹಿಳೆಯರ ವೇಟ್‌ಲಿಫ್ಟಿಂಗ್‌ನಲ್ಲಿ ಸಂಜಿತಾ ಅವರು ಚಿನ್ನ ಗೆದ್ದಿದ್ದರು.

ಎರಡನೇ ಪರೀಕ್ಷೆಯಲ್ಲೂ ಉದ್ದೀಪನ ಮದ್ದು ಸೇವನೆ ಮಾಡಿರುವುದು ಸಾಬೀತಾದರೆ ಸಂಜಿತಾ ಅವರು ಗರಿಷ್ಠ ನಾಲ್ಕು ವರ್ಷಗಳ ಕಾಲ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry