ಗಾಳಿ ಮಳೆಗೆ ಮರ ಧರೆಗೆ

7

ಗಾಳಿ ಮಳೆಗೆ ಮರ ಧರೆಗೆ

Published:
Updated:

ಬೆಂಗಳೂರು: ನಗರದ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಅರ್ಧ ಗಂಟೆ ಕಾಲ ಸುರಿದ ಮಳೆಯಿಂದಾಗಿ ರಸ್ತೆಯಲ್ಲಿ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

ನಗರದ ಕಂಟೋನ್ಮೆಂಟ್‌, ಅಂಡರ್‌ಪಾಸ್‌, ಟಿ.ವಿ ಟವರ್‌, ಹೆಬ್ಬಾಳ ಮೆಲ್ಸೇತುವೆ, ಕೋರಮಂಗಲ ಜಂಕ್ಷನ್‌, ಐಟಿಪಿಎಲ್‌ ಮುಖ್ಯ ರಸ್ತೆಯಲ್ಲಿ ಮಳೆ ನೀರು ಚರಂಡಿಗಳಲ್ಲಿ ಹರಿಯದೆ ರಸ್ತೆಯಲ್ಲಿ ಸಂಗ್ರವಾಗಿದ್ದರಿಂದ ಪಾದಚಾರಿಗಳು, ವಾಹನ ಸವಾರರು ತೊಂದರೆ ಅನುಭವಿಸಿದರು.

ಮಳೆಯೊಂದಿಗೆ ಬೀಸಿದ ಗಾಳಿಗೆ ಸಹಕಾರ ನಗರ, ಸದಾಶಿವ ನಗರ, ಭೂಪಸಂದ್ರ, ಡಾಲರ್ಸ್‌ ಕಾಲೊನಿ, ದೊಡ್ಡಬೊಮ್ಮಸಂದ್ರ, ಸುಬ್ರಹ್ಮಣ್ಯ ನಗರ, ವೈಯಾಲಿಕಾವಲ್‌ನಲ್ಲಿ ಮರಗಳು ಧರೆಗುರುಳಿವೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಹೆಸರಘಟ್ಟ ಮುಖ್ಯ ರಸ್ತೆ, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌, 8ನೇ ಮೈಲಿ, ಮಹಾತ್ಮ ಗಾಂಧಿ ರಸ್ತೆ, ಇಂದಿರಾ ನಗರ, ವಿಧಾನಸೌಧದ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry