ಕ್ವಾರ್ಟರ್‌ಗೆ ಬೋಪಣ್ಣ–ವಸೆಲಿನ್‌

7

ಕ್ವಾರ್ಟರ್‌ಗೆ ಬೋಪಣ್ಣ–ವಸೆಲಿನ್‌

Published:
Updated:
ಕ್ವಾರ್ಟರ್‌ಗೆ ಬೋಪಣ್ಣ–ವಸೆಲಿನ್‌

ಪ್ಯಾರಿಸ್‌: ಭಾರತದ ರೋಹನ್ ಬೋಪಣ್ಣ ಮತ್ತು ಫ್ರಾನ್ಸ್‌ನ ಎಡ್ವರ್ಡ್‌ ರೋಜರ್‌ ವಸೆಲಿನ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಡಬಲ್ಸ್‌ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಬೋಪಣ್ಣ ಮತ್ತು ಎಡ್ವರ್ಡ್‌ 6–4, 7–6ರ ನೇರ ಸೆಟ್‌ಗಳಿಂದ ಬ್ರೆಜಿಲ್‌ನ ಮಾರ್ಷೆಲೊ ಮೆಲೊ ಮತ್ತು ಪೋಲೆಂಡ್‌ನ ಲುಕಾಸ್‌ ಕುಬೊಟ್‌ ಅವರಿಗೆ ಆಘಾತ ನೀಡಿದರು. ಈ ಹೋರಾಟ ಒಂದು ಗಂಟೆ 30 ನಿಮಿಷ ನಡೆಯಿತು.

ಮಾರ್ಷೆಲೊ ಮತ್ತು ಕುಬೊಟ್‌ ಅವರು ಟೂರ್ನಿಯಲ್ಲಿ ಅಗ್ರಶ್ರೇಯಾಂಕ ಹೊಂದಿದ್ದರು.

ಕರ್ನಾಟಕದ ಬೋಪಣ್ಣ ಅವರು ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಮೂರನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದರು. 2011 ಮತ್ತು 2016ರಲ್ಲೂ ಅವರು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದರು.

ಟೂರ್ನಿಯಲ್ಲಿ 13ನೇ ಶ್ರೇಯಾಂಕ ಹೊಂದಿರುವ ಬೋಪಣ್ಣ ಮತ್ತು ಎಡ್ವರ್ಡ್‌ ಅವರು ಈ ಪಂದ್ಯದಲ್ಲಿ ಏಳು ಬ್ರೇಕ್‌ ಪಾಯಿಂಟ್ಸ್‌ಗಳನ್ನು ಕಾಪಾಡಿಕೊಂಡರು.

ಎಂಟರ ಘಟ್ಟದ ಹಣಾಹಣಿಯಲ್ಲಿ ಬೋಪಣ್ಣ ಮತ್ತು ಎಡ್ವರ್ಡ್‌ ಅವರು ನಿಕೋಲಾ ಮೆಕ್‌ಟಿಕ್‌ ಮತ್ತು ಅಲೆಕ್ಸಾಂಡರ್‌ ಪೇಯಾ ವಿರುದ್ಧ ಸೆಣಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry