ಕ್ರಿಕೆಟಿಗ ಮಯಂಕ್–ಆಶಿತಾ ಮದುವೆ: ಇಂದು ಆರತಕ್ಷತೆ

7

ಕ್ರಿಕೆಟಿಗ ಮಯಂಕ್–ಆಶಿತಾ ಮದುವೆ: ಇಂದು ಆರತಕ್ಷತೆ

Published:
Updated:
ಕ್ರಿಕೆಟಿಗ ಮಯಂಕ್–ಆಶಿತಾ ಮದುವೆ: ಇಂದು ಆರತಕ್ಷತೆ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ತಂಡದ ಆಟಗಾರ ಮಯಂಕ್ ಅಗರವಾಲ್ ಅವರು ತಮ್ಮ ಬಹುಕಾಲದ ಗೆಳತಿ ಆಶಿತಾ ಸೂದ್ ಅವರನ್ನು ಮದುವೆಯಾದರು.

ಕಳೆದ ಒಂದು ವಾರದಿಂದ ಎರಡೂ ಕುಟುಂಬಗಳಲ್ಲಿ ಮದುವೆಯ ವಿವಿಧ ಸಮಾರಂಭಗಳು ನಡೆದಿದ್ದವು. ಸೋಮವಾರ ಸಂಜೆ ಮತ್ತು  ಮಂಗಳವಾರ ಬೆಳಿಗ್ಗೆ ನಡೆದ ವಿವಾಹದ ವಿಧಿ ವಿಧಾನಗಳಲ್ಲಿ ಎರಡೂ ಕುಟುಂಬಗಳ ಸದಸ್ಯರು ಮತ್ತು ಕ್ರಿಕೆಟಿಗರಾದ ಕೆ.ಎಲ್. ರಾಹುಲ್, ರೋನಿತ್ ಮೋರೆ, ಡೇವಿಡ್‌ ಮಥಾಯಿಸ್‌ ಮತ್ತಿತರರು ಹಾಜರಿದ್ದರು.

ಬುಧವಾರ ಹೋಟೆಲ್‌ನಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಮಯಂಕ್ ಅವರ ಸಹ ಆಟಗಾರರು, ಹಿರಿಯ ಕ್ರಿಕೆಟಿಗರು ಭಾಗವಹಿಸುವ ನಿರೀಕ್ಷೆ ಇದೆ. ಮಯಂಕ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿ ಆಡಿದ್ದರು.

ಮಯಂಕ್ ಅವರ ತಂದೆ, ಉದ್ಯಮಿ ಅನುರಾಗ್ ಅಗರವಾಲ್ ಮತ್ತು ಆಶಿತಾ ಸೂದ್ ಅವರ ತಂದೆ, ಹಿರಿಯ ಪೊಲೀಸ್ ಅಧಿಕಾರಿ ಪ್ರವೀಣ್ ಸೂದ್ ಅವರು ಬಹಳ ವರ್ಷಗಳಿಂದ ಸ್ನೇಹಿತರು.  ಹೋದ ಫೆಬ್ರುವರಿಯಲ್ಲಿ ಮಯಂಕ್ ಅವರು ಆಶಿತಾ ಅವರಿಗೆ ಲಂಡನ್‌ನಲ್ಲಿ ಪ್ರೇಮನಿವೇದನೆ ಮಾಡಿ ದ್ದರು. ಅದೇ ಸಂದರ್ಭದಲ್ಲಿ ಅವರ ನಿಶ್ಚಿತಾರ್ಥವೂ ಆಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry