5 ಲಕ್ಷ ವೈಫೈ ಹಾಟ್‌ಸ್ಪಾಟ್ ಅಳವಡಿಕೆಗೆ ಟೆಂಡರ್

7

5 ಲಕ್ಷ ವೈಫೈ ಹಾಟ್‌ಸ್ಪಾಟ್ ಅಳವಡಿಕೆಗೆ ಟೆಂಡರ್

Published:
Updated:
5 ಲಕ್ಷ ವೈಫೈ ಹಾಟ್‌ಸ್ಪಾಟ್ ಅಳವಡಿಕೆಗೆ ಟೆಂಡರ್

ನವದೆಹಲಿ: ಭಾರತ್‌ ನೆಟ್ ಯೋಜನೆ ಅಡಿ ದೇಶದ 2.3 ಲಕ್ಷ ಗ್ರಾಮ ಪಂಚಾಯಿತಿಗಳಲ್ಲಿ 5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳ ಅಳವಡಿಕೆಗೆ ದೂರಸಂಪರ್ಕ ಸಚಿವಾಲಯವು ಟೆಂಡರ್ ಕರೆದಿದೆ.

5 ಲಕ್ಷ ಹಾಟ್‌ಸ್ಪಾಟ್‌ಗಳ ಅಳವಡಿ ಕೆಗೆ ₹ 4,000 ಕೋಟಿ ವೆಚ್ಚ ಮಾಡಲು ಸಚಿವಾಲಯವು ಈ ಹಿಂದೆಯೇ ಅನುಮತಿ ನೀಡಿತ್ತು.

‘ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವೈಫೈ ಹಾಟ್‌ಸ್ಪಾಟ್‌ ಅಥವಾ ಅದಕ್ಕೆ ಸರಿಸಮನಾದ ಬ್ರಾಡ್‌ಬ್ಯಾಂಡ್ ಸಂಪರ್ಕ ಕಲ್ಪಿಸಲು ಈ ಟೆಂಡರ್ ಕರೆಯಲಾಗಿದೆ’ ಎಂದು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ವೈಫೈಗೆ ₹ 1.5 ಲಕ್ಷ ಮೊತ್ತ ನಿಗದಿ ಮಾಡಲಾಗಿದೆ. 1,000 ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಯಲ್ಲಿ ಒಂದು, 3,500 ಜನಸಂಖ್ಯೆಯಿದ್ದಲ್ಲಿ ಎರಡು, 7,500 ಜನರಿದ್ದಲ್ಲಿ ಮೂರು, 12,000 ಜನಸಂಖ್ಯೆಗೆ ನಾಲ್ಕು ಮತ್ತು 12 ಸಾವಿರಕ್ಕಿಂತ ಹೆಚ್ಚು ಜನರಿರುವ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಐದು ವೈಫೈ ಹಾಟ್‌ಸ್ಪಾಟ್‌ಗಳನ್ನು ಅಳವಡಿಸಲಾಗುತ್ತದೆ.

ವರ್ಷದ ಅಂತ್ಯದೊಳಗೆ ಈ ಯೋಜನೆ ಪೂರ್ಣವಾಗಲಿದೆ ಎಂದು ತಿಳಿಸಲಾಗಿದೆ.

**

* ವೈಫೈ ಅಳವಡಿಸಿದ ಕಂಪನಿಯೇ ಅವನ್ನು 4 ವರ್ಷ ನಿರ್ವಹಿಸಬೇಕು

* ಪೊಲೀಸ್ ಠಾಣೆ, ಅಂಚೆ ಕಚೇರಿ, ಶಾಲೆ, ಆರೋಗ್ಯ ಕೇಂದ್ರಗಳಲ್ಲಿ ಸೇವೆ ಲಭ್ಯ

* ಈ ವೈಫೈ ಸಂಪರ್ಕದಿಂದ ಸಾರ್ವಜನಿಕರು ಆನ್‌ಲೈನ್ ಕರೆ ಮಾಡಲೂ ಅವಕಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry