ಆನಂದ್‌ಗೆ ಸೋಲು

7

ಆನಂದ್‌ಗೆ ಸೋಲು

Published:
Updated:
ಆನಂದ್‌ಗೆ ಸೋಲು

ಸ್ಟಾವೆಂಜರ್‌, ನಾರ್ವೆ: ಭಾರತದ ವಿಶ್ವನಾಥನ್‌ ಆನಂದ್‌ ಅವರು ಅಲ್ಟಿಬಾಕ್ಸ್‌ ನಾರ್ವೆ ಚೆಸ್‌ ಟೂರ್ನಿಯ ಪಂದ್ಯದಲ್ಲಿ ಸೋತಿದ್ದಾರೆ.

ಗುರುವಾರ ನಡೆದ ಎಂಟನೇ ಸುತ್ತಿನ ಹಣಾಹಣಿಯಲ್ಲಿ ಆನಂದ್‌, ಅಮೆರಿಕದ ಫ್ಯಾಬಿಯಾನೊ ಕರುವಾನ ವಿರುದ್ಧ ಪರಾಭವಗೊಂಡರು.

ಇದರೊಂದಿಗೆ ಪಾಯಿಂಟ್ಸ್ ಪಟ್ಟಿ ಯಲ್ಲಿ ಜಂಟಿ ಐದನೇ ಸ್ಥಾನಕ್ಕೆ ಕುಸಿದರು. ಆನಂದ್‌ ಖಾತೆಯಲ್ಲಿ 3.5 ಪಾಯಿಂಟ್ಸ್‌ ಇವೆ. ಅಜರ್‌ಬೈಜಾನ್‌ನ ಶಖ್ರಿಯಾರ್‌ ಮಮೆದ್ಯರೊವ್‌, ಅರ್ಮೇನಿಯಾದ ಲೆವೊನ್‌ ಅರೋನಿಯನ್‌ ಅವರೂ ಇಷ್ಟೇ ಪಾಯಿಂಟ್ಸ್‌ ಹೊಂದಿದ್ದಾರೆ.

ಅಮೆರಿಕದ ಕರುವಾನ, ವೆಸ್ಲಿ ಸೊ ಮತ್ತು ಹಿಕಾರು ನಕಮುರಾ ಹಾಗೂ ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಎಂಟನೇ ಸುತ್ತಿನ ಪೈಪೋಟಿಯಲ್ಲಿ ವಿಶ್ವ ಚಾಂಪಿಯನ್‌ ಕಾರ್ಲ್‌ಸನ್‌, ಅಜರ್‌ಬೈಜಾನ್‌ನ ಮಮೆದ್ಯರೊವ್‌ ವಿರುದ್ಧ ಪಾಯಿಂಟ್‌ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry