ನನ್ನ ಬೆಂಬಲ ಬ್ರೆಜಿಲ್‌ ತಂಡಕ್ಕೆ: ಗಂಗೂಲಿ

7
ಸಿಎಬಿ ಅಧ್ಯಕ್ಷ ಸೌರವ್‌ ಗಂಗೂಲಿ ಅನಿಸಿಕೆ

ನನ್ನ ಬೆಂಬಲ ಬ್ರೆಜಿಲ್‌ ತಂಡಕ್ಕೆ: ಗಂಗೂಲಿ

Published:
Updated:
ನನ್ನ ಬೆಂಬಲ ಬ್ರೆಜಿಲ್‌ ತಂಡಕ್ಕೆ: ಗಂಗೂಲಿ

ಕೋಲ್ಕತ್ತ: ‘ಬ್ರೆಜಿಲ್‌ ನನ್ನ ನೆಚ್ಚಿನ ತಂಡ. ಈ ಬಾರಿಯ ವಿಶ್ವಕಪ್‌ನಲ್ಲಿ ಆ ತಂಡವನ್ನು ಬೆಂಬಲಿಸುತ್ತೇನೆ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಸೌರವ್‌ ಗಂಗೂಲಿ ಹೇಳಿದ್ದಾರೆ.

‘ನಾನು ಬ್ರೆಜಿಲ್‌ ತಂಡವನ್ನು ಬೆಂಬಲಿಸಿದರೂ ಆಟಗಾರನಾಗಿ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ನನಗೆ ಇಷ್ಟ. ಬ್ರೆಜಿಲ್‌ ಬಿಟ್ಟರೆ ಅರ್ಜೆಂಟೀನಾ ಹಾಗೂ ಜರ್ಮನಿ ತಂಡಗಳ ಪಂದ್ಯಗಳು ಹೆಚ್ಚು ಆಸಕ್ತಿ ಹುಟ್ಟಿಸಲಿವೆ. ರಷ್ಯಾಗೆ ತೆರಳಿ ಫೈನಲ್‌ ಪಂದ್ಯವನ್ನು ವೀಕ್ಷಿಸುವ ಇರಾದೆ ಇದೆ’ ಎಂದು ಅವರು ಹೇಳಿದ್ದಾರೆ.

‘ಮೆಸ್ಸಿ ಅವರು ತಮ್ಮ ಡ್ರಿಬ್ಲಿಂಗ್‌ ತಂತ್ರಗಾರಿಕೆ, ಆಟದಲ್ಲಿನ ನೈಪುಣ್ಯತೆಯಿಂದ ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ. ನಿಸ್ಸಂದೇಹವಾಗಿ ಅವರೊಬ್ಬ ಶ್ರೇಷ್ಠ ಆಟಗಾರ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

19 ವರ್ಷದೊಳಗಿನವರ ಭಾರತ ಕ್ರಿಕೆಟ್‌ ತಂಡಕ್ಕೆ ಆಯ್ಕೆಯಾಗಿರುವ ಸಚಿನ್‌ ತೆಂಡೂಲ್ಕರ್‌ ಅವರ ಮಗ ಅರ್ಜುನ್‌ ತೆಂಡೂಲ್ಕರ್‌ ಅವರಿಗೆ ಗಂಗೂಲಿ ಅಭಿನಂದಿಸಿದ್ದಾರೆ.

‘ಅರ್ಜುನ್‌ ಅವರ ಆಟವನ್ನು ನಾನು ನೋಡಿಲ್ಲ. ಆದರೆ, ಅವರಲ್ಲಿ ಉತ್ತಮ ಸಾಮರ್ಥ್ಯ ಇದೆ ಎಂಬ ಭರವಸೆ ಇದೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry