ರಾಜೀನಾಮೆಗೆ ಮುಂದಾದ ಪುಟ್ಟರಾಜು

7

ರಾಜೀನಾಮೆಗೆ ಮುಂದಾದ ಪುಟ್ಟರಾಜು

Published:
Updated:

ಮಂಡ್ಯ: ಸಾರಿಗೆ ಸಚಿವ ಸ್ಥಾನದ ಭರವಸೆ ನೀಡಿ ಸಣ್ಣ ನೀರಾವರಿ ಖಾತೆ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಸಿ.ಎಸ್.ಪುಟ್ಟರಾಜು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕನಾಗಿ ಇರುವುದಾಗಿ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಕೊನೆ ಕ್ಷಣದಲ್ಲಿ ಸಂಪುಟ ಸೇರಿದ ಮದ್ದೂರು ಕ್ಷೇತ್ರದ ಶಾಸಕ, ಎಚ್.ಡಿ.ದೇವೇಗೌಡ ಅವರ ಬೀಗರೂ ಆಗಿರುವ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿರುವುದು ಪುಟ್ಟರಾಜು ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಈ ಕುರಿತು ಸಿ.ಎಸ್.ಪುಟ್ಟರಾಜು ಬೆಂಬಲಿಗರ ಬಳಿ ನೋವು ತೋಡಿಕೊಂಡಿದ್ದು, ಸಾರಿಗೆ ಸಚಿವ ಸ್ಥಾನದ ಜೊತೆಗೆ ಜಿಲ್ಲಾ ಉಸ್ತುವಾರಿಯನ್ನೂ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅನ್ಯಾಯ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಚಿವ ಸ್ಥಾನ ನಿರಾಕರಿಸಿ ಕೇವಲ ಶಾಸಕನಾಗಿ ಉಳಿಯುವ ನಿರ್ಧಾರವನ್ನು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿ.ಸಿ.ತಮ್ಮಣ್ಣಗೆ ಸಾರಿಗೆ ಖಾತೆ: ಕಡೇ ಕ್ಷಣದಲ್ಲಿ ಸಂಪುಟ ಸೇರಿದ ಮದ್ದೂರು ಕ್ಷೇತ್ರದ ಶಾಸಕ, ಎಚ್.ಡಿ.ದೇವೇಗೌಡರ ಬೀಗರೂ ಆಗಿರುವ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿರುವುದು ಪುಟ್ಟರಾಜು ಅಸಮಾಧಾನಕ್ಕೆ ಕಾರಣವಾಗಿದೆ.

ಜೆಡಿಎಸ್ ಜಿಲ್ಲಾ ನಾಯಕನಾಗಿ ಎಲ್ಲಾ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ಕಾರಣರಾಗಿರುವ ಪುಟ್ಟರಾಜುಗೆ ಸಣ್ಣ ಖಾತೆ ನೀಡಿ ಸಂಬಂಧಿ ಎಂಬ ಒಂದೇ ಕಾರಣಕ್ಕೆ ತಮ್ಮಣ್ಣ ಅವರಿಗೆ ಸಾರಿಗೆ ಖಾತೆ ನೀಡಿರುವುದು ಪುಟ್ಟರಾಜು ಅವರ ಬೆಂಬಲಿಗರಿಗೂ ನೋವಾಗಿದೆ ಎಂದು ಮೂಲಗಳು ತಿಳಿಸಿವೆ. ಪುಟ್ಟರಾಜು ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರ ಮೊಬೈಲ್ ಸ್ಥಗಿತಗೊಂಡಿತ್ತು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry