ಸಲ್ಮಾನ್‌ ಖಾನ್‌ ಭೇಟಿಯಾದ ‘ಡ್ಯಾನ್ಸಿಂಗ್ ಅಂಕಲ್’ ಸಂಜೀವ್‌ ಶ್ರಿವಾಸ್ತವ

7

ಸಲ್ಮಾನ್‌ ಖಾನ್‌ ಭೇಟಿಯಾದ ‘ಡ್ಯಾನ್ಸಿಂಗ್ ಅಂಕಲ್’ ಸಂಜೀವ್‌ ಶ್ರಿವಾಸ್ತವ

Published:
Updated:
ಸಲ್ಮಾನ್‌ ಖಾನ್‌ ಭೇಟಿಯಾದ ‘ಡ್ಯಾನ್ಸಿಂಗ್ ಅಂಕಲ್’ ಸಂಜೀವ್‌ ಶ್ರಿವಾಸ್ತವ

ಭೋಪಾಲ್: ‘ಗೋವಿಂದ ಡಾನ್ಸ್ ಸ್ಟೈಲ್’ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಚಾರ ಪಡೆದಿದ್ದ ಮಧ್ಯಪ್ರದೇಶ ಪ್ರೊ. ಸಂಜೀವ್ ಶ್ರೀವಾಸ್ತವ ಅವರು ಬಾಲಿವುಡ್‌ ನಟ ಸಲ್ಮಾನ್ ಖಾನ್‌ ಅವರನ್ನು ಭೇಟಿಯಾಗಿದ್ದಾರೆ. 

ಈ ಕುರಿತ ಚಿತ್ರಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶ್ರೀವಾಸ್ತವ ಹಲವು ದಿನಗಳಿಂದ ಬಾಲಿವುಡ್ ನಟ ಗೋವಿಂದ್ ಅವರ ಅಭಿಮಾನಿಯಾಗಿದ್ದು, ಅವರದ್ದೇ ಶೈಲಿಯಲ್ಲಿ ಡಾನ್ಸ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ವಿಡಿಯೊ ವಿಕ್ಷೀಸಿದ್ದ ಬಾಲಿವುಡ್ ಸ್ಟಾರ್‌ಗಳಾದ ಅರ್ಜುನ್ ಕಪೂರ್, ಅನುಷ್ಕಾ ಶರ್ಮಾ, ದಿವ್ಯ ದತ್ತ ಮತ್ತು ಸಂಧ್ಯಾ ಮೆನನ್, ಶ್ರೀವಾಸ್ತವ ಅವರ ಡಾನ್ಸ್ ಶೈಲಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಣ್ ಟ್ವೀಟ್‌ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.

*

*

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry