ಬಾಕ್ಸಿಂಗ್‌: ಭಾರತಕ್ಕೆ ಮೂರು ಕಂಚು

7

ಬಾಕ್ಸಿಂಗ್‌: ಭಾರತಕ್ಕೆ ಮೂರು ಕಂಚು

Published:
Updated:

ನವದೆಹಲಿ: ಭಾರತದ ನುತ್ಲಾಯಿ ಲಾಲ್‌ಬಿಯಾಕಿಮಾ ಅವರು ಕಜಕಿಸ್ತಾನದ ಅಸ್ತಾನಾದಲ್ಲಿ ನಡೆಯುತ್ತಿರುವ ಪ್ರೆಸಿಡೆಂಟ್ಸ್ ಕಪ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿಗೆ ಕೊರಳೊಡ್ಡಿದ್ದಾರೆ.

ಶನಿವಾರ ನಡೆದ 49 ಕೆಜಿ ವಿಭಾಗದ ಸ್ಪರ್ಧೆಯ ಸೆಮಿಫೈನಲ್‌ನಲ್ಲಿ ಅವರು ಸ್ಥಳೀಯ ಎರ್ಜಾನ್‌ ಜೊಮಾರ್ಟ್‌ ಅವರಿಗೆ ಮಣಿದರು. ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ನುತ್ಲಾಯಿ, ಒಲಿಂಪಿಕ್ ಚಾಂಪಿಯನ್‌ ಹಸನ್‌ಬಾಯ್‌ ದುಶ್ಮಟೊವ್‌ ಅವರನ್ನು ಮಣಿಸಿದ್ದರು.

ಭಾರತದ ಸಚಿನ್ ಸಿವಾಚ್‌ 52 ಕೆಜಿ ವಿಭಾಗದಲ್ಲಿ ಫಿಲಿಪಿನೊ ರಾಜೆನ್‌ ಲಾಡನ್‌ ವಿರುದ್ಧ ಸೋತು ಕಂಚು ಗೆದ್ದರು. ಮಹಿಳೆಯರ ವಿಭಾಗದಲ್ಲಿ ಪ್ರಿಯಾಂಕ ಕಂಚಿಗೆ ಕೊರಳೊಡ್ಡಿದರು.

‘ಲಾಲ್‌ಬಿಯಾಕಿಮಾ ಅವರು ಅತ್ಯುತ್ತಮ ಸಾಮರ್ಥ್ಯ ತೋರಿದರು. ಸ್ಥಳೀಯ ಒಲಿಂಪಿಕ್ ಚಾಂಪಿಯನ್‌ಗೆ ಸೋಲುಣಿಸಿದ ನಂತರ ಸ್ಥಳೀಯ ಸ್ಪರ್ಧಿಯ ವಿರುದ್ಧ ಅವರು ಸೆಣಸಿದ ವಿಧಾನ ಗಮನಾರ್ಹವಾಗಿತ್ತು’ಎಂದು ಕೋಚ್‌ ಜೈ ಸಿಂಗ್ ಪಾಟೀಲ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry