ವಿಧಾನ ಪರಿಷತ್ ಸದಸ್ಯ ಆಗಾ ನಿಧನ

7

ವಿಧಾನ ಪರಿಷತ್ ಸದಸ್ಯ ಆಗಾ ನಿಧನ

Published:
Updated:
ವಿಧಾನ ಪರಿಷತ್ ಸದಸ್ಯ ಆಗಾ ನಿಧನ

ರಾಮನಗರ: ವಿಧಾನ‌ ಪರಿಷತ್ ಸದಸ್ಯ ಸಯ್ಯದ್ ಮುದೀರ್ ಆಗಾ (67) ಹೃದಯಾಘಾತದಿಂದ ಶನಿವಾರ ಮುಂಜಾನೆ 1.30ರ ಸುಮಾರಿಗೆ ನಿಧನರಾದರು.

ಬೆಂಗಳೂರಿನ ನಿವಾಸದಲ್ಲಿ ಶುಕ್ರವಾರ ‌ತಡರಾತ್ರಿ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದರು.

ರಾಮನಗರದವರಾದ ಆಗಾ 2012ರ ಜೂನ್‌ನಲ್ಲಿ ಜೆಡಿಎಸ್‌ನಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಈ ತಿಂಗಳಾಂತ್ಯಕ್ಕೆ ಅವರ ಸದಸ್ಯತ್ವ ಅವಧಿ ಕೊನೆಗೊಳ್ಳುತ್ತಿತ್ತು. ಅವರಿಗೆ ಪತ್ನಿ, ಪುತ್ರ, ಮೂವರು ಪುತ್ರಿಯರು ಇದ್ದಾರೆ.

ರಾಮನಗರದಲ್ಲಿ ಶನಿವಾರ ರಾತ್ರಿ ಅಂತ್ಯಕ್ರಿಯೆ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry