‘ಭಾರತದಲ್ಲಿ ಫುಟ್‌ಬಾಲ್‌ ಸಂಸ್ಕೃತಿ ಬೆಳೆಯಬೇಕು’

7

‘ಭಾರತದಲ್ಲಿ ಫುಟ್‌ಬಾಲ್‌ ಸಂಸ್ಕೃತಿ ಬೆಳೆಯಬೇಕು’

Published:
Updated:

ನವದೆಹಲಿ: ‘ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸ್ಪರ್ಧಿಸಬೇಕೆಂದರೆ ಮೊದಲಿಗೆ ಭಾರತದಲ್ಲಿ ಫುಟ್‌ಬಾಲ್‌ ಸಂಸ್ಕೃತಿ ಬೆಳೆಯಬೇಕು’ ಎಂದು ಭಾರತದ ಹಿರಿಯ ಫುಟ್‌ಬಾಲ್‌ ಆಟಗಾರ ಬೈಚುಂಗ್‌ ಭುಟಿಯಾ ಹೇಳಿದ್ದಾರೆ.

‘ಫುಟ್‌ಬಾಲ್‌ ಸಂಸ್ಕೃತಿ ನಮ್ಮಲ್ಲಿ ಬೇರೂರಬೇಕು. ಕೇವಲ ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ನಾವು ಸಿದ್ಧತೆ ಮಾಡಿಕೊಂಡರೆ ಪ್ರಯೋಜನವಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಫುಟ್‌ಬಾಲ್‌ ತಂಡ ಹಲವು ಸಾಧನೆ ಮಾಡಿದೆ. ಆದರೆ ವಿಶ್ವಕಪ್‌ನಲ್ಲಿ ಸ್ಪರ್ಧಿಸಲು ಇದಕ್ಕಿಂತ ಹೆಚ್ಚಿನ ತಯಾರಿ ಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮ್ಮಲ್ಲಿ ಸಾಕಷ್ಟು ಪ್ರತಿಭಾಶಾಲಿ ಆಟಗಾರರಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಮೂಲಸೌಕರ್ಯವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಯುವ ಆಟಗಾರರಿಗೆ ಪ್ರೋತ್ಸಾಹ ನೀಡುವ ಹಲವು ಯೋಜನೆಗಳು ಜಾರಿಯಲ್ಲಿವೆ. ಆದರೆ, ಒಂದು ಕ್ರೀಡೆಯ ಸಮಗ್ರ ಬೆಳವಣಿಗೆಗೆ ಅಗತ್ಯವಿರುವ ಬೇರು ಮಟ್ಟದ ಸಂಸ್ಕೃತಿ ಅವಶ್ಯಕ’ ಎಂದಿದ್ದಾರೆ.

‘ಯುರೋಪ್‌ನ ಪ್ರತಿಷ್ಠಿತ ಕ್ಲಬ್‌ಗಳೊಂದಿಗೆ ರಾಷ್ಟ್ರದಲ್ಲಿರುವ ಪ್ರಮುಖ ಫುಟ್‌ಬಾಲ್‌ ಕ್ಲಬ್‌ಗಳು ಒಪ್ಪಂದ ಮಾಡಿಕೊಳ್ಳಬೇಕು. ಉದಾಹರಣೆಗೆ ಬಾರ್ಸಿಲೋನಾ ಫುಟ್‌ಬಾಲ್‌ ಅಕಾಡೆಮಿಯು ನಮ್ಮಲ್ಲಿನ ಯುವ ಆಟಗಾರರಿಗೆ ಉತ್ತಮ ವೇದಿಕೆಯಾಗಲಿದೆ. ಯುರೋಪ್‌ ಹಾಗೂ ಲ್ಯಾಟಿನ್‌ ಅಮೆರಿಕದ ತಂಡಗಳಲ್ಲಿರುವ ಗುಣಮಟ್ಟ ನಮ್ಮಲ್ಲೂ ಬರಬೇಕಾದರರೆ ಇಂತಹ ಯೋಜನೆಗಳನ್ನು ಗಂಭೀರವಾಗಿ ಅನುಷ್ಠಾನಗೊಳಿಸಬೇಕು’ ಎಂದು ಮತ್ತೊಬ್ಬ ಹಿರಿಯ ಫುಟ್‌ಬಾಲ್‌ ಆಟಗಾರ ಐ. ಎಂ. ವಿಜಯನ್‌ ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry