ವಿದೇಶಿ ಹೂಡಿಕೆ ₹ 2,200 ಕೋಟಿ

7
ಕಚ್ಚಾ ತೈಲ ದರ ಇಳಿಕೆಯ ಪ್ರಭಾವ

ವಿದೇಶಿ ಹೂಡಿಕೆ ₹ 2,200 ಕೋಟಿ

Published:
Updated:

ನವದೆಹಲಿ: ವಿದೇಶಿ ಹೂಡಿಕೆದಾರರು ಹಿಂದಿನ ಆರು ವಹಿವಾಟು ಅವಧಿಯಲ್ಲಿ (ಜೂನ್‌ 1 ರಿಂದ 8) ಷೇರು ಮಾರುಕಟ್ಟೆಯಲ್ಲಿ ₹ 2,200 ಕೋಟಿ ಬಂಡವಾಳ ತೊಡಗಿಸಿದ್ದಾರೆ.

ಹಿಂದಿನ ಎರಡು ತಿಂಗಳಿನಲ್ಲಿ ₹ 15,600 ಕೋಟಿಗೂ ಅಧಿಕ ಮೊತ್ತವನ್ನು ಹಿಂದಕ್ಕೆ ಪಡೆದಿದ್ದರು. ಆರು ವಹಿವಾಟು ಅವಧಿಯಲ್ಲಿ ಸಾಲಪತ್ರ ಮಾರುಕಟ್ಟೆಯಿಂದ ₹ 405 ಕೋಟಿ ಬಂಡವಾಳ ವಾಪಸ್‌ ಪಡೆದಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆ ಹಾಗೂ ಕಾರ್ಪೊರೇಟ್‌ ಗಳಿಕೆಯಲ್ಲಿನ ಸುಧಾರಣೆಯಿಂದಾಗಿ ಹೂಡಿಕೆ ಮಾಡಲಾರಂಭಿಸಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.

ಉತ್ತಮ ಮುಂಗಾರು ಮತ್ತು ಬಿತ್ತನೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಾಗುವ ನಿರೀಕ್ಷೆ ಇದೆ ಎಂದು ಪಿಎಂಎಸ್‌ ಪ್ರಭುದಾಸ್‌ ಲೀಲಾಧರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಅಜಯ್‌ ಬೋಡ್ಕೆ ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry