ಸಚಿವ ಶಿವಾನಂದ ಸ್ವಾಗತಕ್ಕೆ ಸಿದ್ಧತೆ

7
ಅಭಿನಂದನಾ ಸಮಾರಂಭ: ಪಟ್ಟಣದಲ್ಲಿ ರಾರಾಜಿಸಿದ ಕಟೌಟ್‌ಗಳು

ಸಚಿವ ಶಿವಾನಂದ ಸ್ವಾಗತಕ್ಕೆ ಸಿದ್ಧತೆ

Published:
Updated:

ಬಸವನಬಾಗೇವಾಡಿ: ಶಾಸಕ ಶಿವಾನಂದ ಪಾಟೀಲ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರಾದ ಬಳಿಕ ಪ್ರಥಮ ಬಾರಿಗೆ ಪಟ್ಟಣಕ್ಕೆ ಬುಧವಾರ ಬರುತ್ತಿದ್ದು, ಅವರಿಗೆ ಬೆಂಬಲಿಗರು, ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಲಿದ್ದಾರೆ.

‘ಪಟ್ಟಣದಲ್ಲಿ ಅಭಿನಂದನಾ ಸಮಾರಂಭ ಹಾಗೂ ಪೌರಸನ್ಮಾನ ಹಮ್ಮಿಕೊಳ್ಳಲಾಗಿದೆ’ ಎಂದು ಕಾಂಗ್ರೆಸ್‌ ಬ್ಲಾಕ್‌ ಘಟಕದ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಸಚಿವರಿಗೆ ಅದ್ಧೂರಿ ಸ್ವಾಗತ ಕೋರಲಾಗುವುದು. ನಂತರ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸುವರು. ನಂತರ ಬಸವೇಶ್ವರ ವೃತ್ತ, ಬಸ್‌ ನಿಲ್ದಾಣ, ರಾಣಿ ಚನ್ನಮ್ಮ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.

‘ಸಚಿವರಿಗೆ ಪೌರ ಸನ್ಮಾನ ಮಾಡಲಾಗುವುದು. ನಂತರ ಇಂಗಳೇಶ್ವರಕ್ಕೆ ತೆರಳಿ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿವರು. ನಂತರ ಗ್ರಾಮಸ್ಥರಿಂದ ಸನ್ಮಾನ ಕಾರ್ಯಕ್ರಮ ನಡೆಯಲಿದೆ’ ಎಂದು ಹೇಳಿದರು.

ಲೋಕನಾಥ ಅಗರವಾಲ, ಬಸಣ್ಣ ದೇಸಾಯಿ, ರವಿ ರಾಠೋಡ, ರವಿ ಚಿಕ್ಕೊಂಡ, ಬಸವರಾಜ ಕೋಟಿ, ಸಂಗಮೇಶ ಓಲೇಕಾರ,ಉದಯ ಮಾಂಗಲೇಕರ, ಅನಿಲ ಅಗರವಾಲ, ಅಜೀಜ ಬಾಗವಾನ, ಬಸವರಾಜ ರಾಯಗೊಂಡ, ಸಂಗಮೇಶ ವಾಡೇದ, ಕಾಶೀನಾಥ ರಾಠೋಡ ಇದ್ದರು.

ರಾರಾಜಿಸಿದ ಕಟೌಟ್‌: ಸಚಿವ ಶಿವಾನಂದ ಪಾಟೀಲ ಅವರ ಸ್ವಾಗತಕ್ಕಾಗಿ ಕಾಂಗ್ರೆಸ್‌ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಹಾಕಿಸಿರುವ ಕಟೌಟ್‌ಗಳು  ರಾರಾಜಿಸುತ್ತಿವೆ.

ರಾಣಿ ಚೆನ್ನಮ್ಮ ವೃತ್ತ, ಬಸವೇಶ್ವರ ವೃತ್ತ, ಬಸ್‌ ನಿಲ್ದಾಣ, ತೆಲಗಿ ರಸ್ತೆ ಸೇರಿದಂತೆ ವಿವಿಧೆಡೆ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry