ಅಮ್ಮ ಐ ಲವ್ ಯು

7

ಅಮ್ಮ ಐ ಲವ್ ಯು

Published:
Updated:

ಅಮ್ಮ ಐ ಲವ್ ಯು

ದ್ವಾರಕೀಶ್ ಚಿತ್ರ ಲಾಂಛನದಲ್ಲಿ ಬಿ.ಎಸ್. ದ್ವಾರಕೀಶ್ ಹಾಗೂ ಯೋಗೀಶ್ ದ್ವಾರಕೀಶ್ ನಿರ್ಮಿಸಿರುವ ‘ಅಮ್ಮ ಐ ಲವ್ ಯು’ ಚಿತ್ರಕ್ಕೆ ಕೆ.ಎಂ. ಚೈತನ್ಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ತಮಿಳಿನ ಪಿಚ್ಚಕಾರನ್‌ ಚಿತ್ರದ ಕನ್ನಡ ಅವತರಣಿಕೆ. ರಾಜಶೇಖರ್ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಚಿರಂಜೀವಿ ಸರ್ಜಾ, ನಿಶ್ವಿಕಾ ನಾಯ್ಡು, ಪ್ರಕಾಶ್ ಬೆಳವಾಡಿ, ಸಿತಾರಾ, ಚಿಕ್ಕಣ್ಣ, ರವಿಕಾಳೆ ಬಿರಾದಾರ್, ತರಂಗ ವಿಶ್ವ, ಗಿರಿ ದ್ವಾರಕೀಶ್, ಅವಿನಾಶ್ ತಾರಾಗಣದಲ್ಲಿದ್ದಾರೆ.

ಕಟ್ಟುಕಥೆ

ಸ್ವೀಟ್ಸ್ ಮಹದೇವ ಮೈಸೂರು ಅವರು ನಿರ್ಮಿಸಿರುವ ‘ಕಟ್ಟುಕಥೆ’ದ ನಿರ್ದೇಶಕರು ರಾಜ್‌ ಪ್ರವೀಣ್. ಈ ಚಿತ್ರಕ್ಕೆ ವಿಕ್ರಂ ಸುಬ್ರಮಣ್ಯ ಸಂಗೀತ ನೀಡಿದ್ದಾರೆ. ಮನು ಬಿ.ಕೆ ಛಾಯಾಗ್ರಹಣ ಇರುವ ಈ ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳನ್ನು ರಾಜು ನಾಗನಗೌಡ ರಚಿಸಿದ್ದಾರೆ. ಸೂರ್ಯ, ಸ್ವಾತಿ ಕೊಂಡೆ, ರಾಜೇಶ್ ನಟರಂಗ, ಮಿತ್ರ, ಕೆಂಪೇಗೌಡ, ಬೃನಾಲಿ ಶೆಟ್ಟಿ, ರಿಹಾಂಸಿ ಗೌಡ, ಸೂರ್ಯ ಕುಂದಾಪುರ, ಮೋಹನ್ ಜುನೇಜ, ನಟನ ಪ್ರಶಾಂತ್, ರಜನಿಕಾಂತ್ ತಾರಾಬಳಗದಲ್ಲಿದ್ದಾರೆ.

ಮೇಘಾ ಅಲಿಯಾಸ್ ಮ್ಯಾಗಿ

ವಿನಯ್ ಕುಮಾರ್ ನಿರ್ಮಿಸಿರುವ ಸಿನಿಮಾ ‘ಮೇಘಾ ಅಲಿಯಾಸ್ ಮ್ಯಾಗಿ’. ವಿಶಾಲ್ ಪುಟ್ಟಣ್ಣ ಕಥೆ, ಚಿತ್ರಕಥೆ ರಚಿಸಿ, ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಜಿನೀಸ್ ಪೈಕಟ್ಟು ಹಾಗೂ ಜಯಪ್ರಕಾಶ್ ಛಾಯಾಗ್ರಹಣ, ಅತಿಶಯ ಜೈನ್ ಸಂಗೀತವಿದೆ. ವಿನು ಮನಸು ಹಿನ್ನೆಲೆ ಸಂಗೀತ ನೀಡಿದ್ದಾರೆ. ಸುಕೃತಾ ವಾಗ್ಲೆ, ತೇಜ್ ಗೌಡ, ನೀತು ಬಾಲ, ಕಿರಣ್ ಕುಮಾರ್, ಮಂಜು ಪಾವಗಡ, ಅಶ್ವಿನ್ ಕುಮಾರ್, ಮಹೇಶ್ ಗೌಡ, ನಟರಾಜ್, ತನುಷ್ ತಾರಾಬಳಗದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry