ಟಿಕೆಟ್‌ ತಪ್ಪಾಗಿ ಮುದ್ರಣ ದಂಡತೆತ್ತ ರೈಲ್ವೆ ಇಲಾಖೆ

7

ಟಿಕೆಟ್‌ ತಪ್ಪಾಗಿ ಮುದ್ರಣ ದಂಡತೆತ್ತ ರೈಲ್ವೆ ಇಲಾಖೆ

Published:
Updated:

ಶಹರಾನ್‌ಪುರ: ಕಾಯ್ದಿರಿಸಿದ ರೈಲಿನ ಟಿಕೆಟ್‌ನಲ್ಲಿ ಪ್ರಯಾಣದ ವರ್ಷವನ್ನು ತಪ್ಪಾಗಿ ಮುದ್ರಿಸಿದ್ದಲ್ಲದೆ, ಪ್ರಯಾಣದ ಮಧ್ಯೆ ರೈಲಿನಿಂದ ಹಿರಿಯ ನಾಗರಿಕರೊಬ್ಬರನ್ನು ಇಳಿಸಿದ ರೈಲ್ವೆ ಇಲಾಖೆಗೆ ಇಲ್ಲಿನ ಗ್ರಾಹಕ ನ್ಯಾಯಾಲಯ ₹13 ಸಾವಿರ ದಂಡ ವಿಧಿಸಿದೆ.

70 ವರ್ಷದ ನಿವೃತ್ತ ಪ್ರಾಧ್ಯಾಪಕ ವಿಷ್ಣುಕಾಂತ್‌ ಶುಕ್ಲಾ ಅವರು ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ ಕೇಂದ್ರದಲ್ಲಿ ಕನೌಜ್‌ಗೆ ಮುಂಗಡ ಟಿಕೆಟ್‌ ಬುಕ್‌ ಮಾಡಿದ್ದರು. ಆ ಟಿಕೆಟ್‌ನಲ್ಲಿ 2013ನೇ ಇಸವಿ ಎಂದು ಮುದ್ರಿಸುವ ಬದಲಿಗೆ 3013ನೇ ಇಸವಿ ಎಂದು ಮುದ್ರಿಸಲಾಗಿತ್ತು.

ಶುಕ್ಲಾ ಅವರು ಪ್ರಯಾಣಿಸುವಾಗ ಟಿಕೆಟ್ ಪರೀಕ್ಷಕರು ಆಗಿರುವ ತಪ್ಪನ್ನು ಗಮನಿಸಿ, ದಂಡ ತೆರುವಂತೆ ಅವರಿಗೆ ಸೂಚಿಸಿದರು. ಶುಕ್ಲಾ ನಿರಾಕರಿಸಿದಾಗ ಅವರನ್ನು ರೈಲಿನಿಂದ ಮಧ್ಯದಲ್ಲೇ ಇಳಿಸಲಾಗಿತ್ತು.

ಇದಾದ ನಂತರ ಶುಕ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ತಮಗಾದ ಮಾನಸಿಕ ಹಿಂಸೆ, ತೊಂದರೆಗೆ ಪರಿಹಾರ ಕೊಡಿಸುವಂತೆ ಕೋರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry