ನಿಷೇಧವಿದ್ದರೂ ಪ್ರಾರ್ಥನೆ ಸಲ್ಲಿಸಿದ ಉಗ್ರ ಸಯೀದ್‌

7

ನಿಷೇಧವಿದ್ದರೂ ಪ್ರಾರ್ಥನೆ ಸಲ್ಲಿಸಿದ ಉಗ್ರ ಸಯೀದ್‌

Published:
Updated:
ನಿಷೇಧವಿದ್ದರೂ ಪ್ರಾರ್ಥನೆ ಸಲ್ಲಿಸಿದ ಉಗ್ರ ಸಯೀದ್‌

ಲಾಹೋರ್: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸಯೀದ್ ನೇತೃತ್ವದ ಸಂಘಟನೆ ಜಮಾತ್ ಉದ್ ದವಾ ಮೇಲೆ ‍ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದ್ದರೂ ಈದ್‌ ಉಲ್‌ ಫಿತ್ರ್‌ ಅಂಗವಾಗಿ ಶನಿವಾರ ನಡೆದ ಪ್ರಾರ್ಥನೆಯಲ್ಲಿ ಸಯೀದ್‌ ಭಾಗಿಯಾಗಿದ್ದ. ಇಲ್ಲಿನ ಗಡಾಫಿ ಸ್ಟೇಡಿಯಂನಲ್ಲಿ ಭಾಗಿ ಭದ್ರತೆಯಲ್ಲಿ ಪ್ರಾರ್ಥನೆ ನಡೆಯಿತು.

ಸ್ಟೇಡಿಯಂ ಸುತ್ತ ಪೊಲೀಸರು ಮತ್ತು ಸಯೀದ್‌ನ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಪ್ರಾರ್ಥನೆ ನಂತರ ಮಾತನಾಡಿ ಸಯೀದ್‌, ಕಾಶ್ಮೀರಿ ಜನರಿಗಾಗಿ ಪಾಕಿಸ್ತಾನಿಯರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ.

ಸಯೀದ್ ಸಂಘಟನೆ ಮೇಲೆ ಸರ್ಕಾರ ನಿಷೇಧ ಹೇರಿದ್ದರೂ ಆತ ದೇಶದ ಹಲವು ಭಾಗದಲ್ಲಿ ರ‍್ಯಾಲಿ, ಸಾರ್ವಜನಿಕ ಸಮಾರಂಭಗಳನ್ನು ಹಮ್ಮಿಕೊಳ್ಳುತ್ತಲೇ ಇದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry