ನಾಚಿಕೆ ಆಗಲ್ವೇನ್ರಿ, ಥೂ ನಿಮಗೆ: ಸಾರಿಗೆ ಅಧಿಕಾರಿ ಮೇಲೆ ಸಚಿವ ರೇವಣ್ಣ ಗರಂ

7

ನಾಚಿಕೆ ಆಗಲ್ವೇನ್ರಿ, ಥೂ ನಿಮಗೆ: ಸಾರಿಗೆ ಅಧಿಕಾರಿ ಮೇಲೆ ಸಚಿವ ರೇವಣ್ಣ ಗರಂ

Published:
Updated:
ನಾಚಿಕೆ ಆಗಲ್ವೇನ್ರಿ, ಥೂ ನಿಮಗೆ: ಸಾರಿಗೆ ಅಧಿಕಾರಿ ಮೇಲೆ ಸಚಿವ ರೇವಣ್ಣ ಗರಂ

ಧಾರವಾಡ: ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಇಲ್ಲಿನ ಜಿಲ್ಲಾ ಪಂಚಾಯಿತಿ ಭವನದಲ್ಲಿ ನಡೆಯುತ್ತಿರುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುಬ್ಬಳ್ಳಿ–ಧಾರವಾಡ ನಗರ ಸಾರಿಗೆ(ಬಿಆರ್‌ಟಿಎಸ್‌) ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಬಿಆರ್‌ಟಿಎಸ್‌ ಕಾರ್ಯಾನಿರ್ವಾಹಕ ನಿರ್ದೇಶಕ ಹಿರೇಮಠ ಸಭೆಗೆ ಗೈರಾಗಿದ್ದರು. ಇದರಿಂದ ಕುಪಿತಗೊಂಡ ಸಚಿವರು, ‘ಅವನ್ಯಾರ್ರಿ ಎಂ.ಡಿ, ಏನ್ ಕೆಲಸಾ ಮಾಡುತ್ತಿದ್ದಾನೆ. ನಾಚಿಕೆ ಆಗಲ್ವೇನ್ರಿ ನಿಮಗೆ, ಥು ನಿಮಗೆ’ ಎಂದು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡರು. ಸೇರಿದ್ದ ಅಧಿಕಾರಿಗಳು ಸಚಿವರ ಈ ವರ್ತನೆಯಿಂದ ಕಕ್ಕಾಬಿಕ್ಕಿಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry