ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಆಡುವಾಗ ಹೃದಯಾಘಾತ: 22 ವರ್ಷದ ಯುವಕ ಸಾವು

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಘಟನೆ
Published 31 ಡಿಸೆಂಬರ್ 2023, 10:16 IST
Last Updated 31 ಡಿಸೆಂಬರ್ 2023, 10:16 IST
ಅಕ್ಷರ ಗಾತ್ರ

ಖಾರ್ಗೋನ್ (ಮಧ್ಯಪ್ರದೇಶ): ಕ್ರಿಕೆಟ್ ಆಡುವಾಗ 22 ವರ್ಷ ವಯಸ್ಸಿನ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿರುವುದು ವರದಿಯಾಗಿದೆ.

ಮೃತನನ್ನು ಇಂದಾಲ್ ಸಿಂಗ್ ಜಾದವ್ ಎಂದು ಗುರುತಿಸಲಾಗಿದೆ.

ಬಾಲವಾಡ್ ವ್ಯಾಪ್ತಿಯ ಕಾಟ್‌ಕೂಟ್ ಎಂಬಲ್ಲಿ ಭಾನುವಾರ ಕ್ರಿಕೆಟ್ ಟೂರ್ನಾಮೆಂಟ್ ವೇಳೆ ಇಂದಾಲ್ ಬೌಲಿಂಗ್ ಮಾಡುವ ವೇಳೆ ಏಕಾಏಕಿ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಬದುಕುಳಿಯಲಿಲ್ಲ. ತೀವ್ರ ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇಂದಾಲ್ ಸಿಂಗ್ ಜಾದವ್ ಖಾರ್ಗೋನ್ ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರಿಕೆಟ್ ಆಟಗಾರ ಆಗಿದ್ದರು ಎಂದು ಸ್ನೇಹಿತರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT