ಭರೂಚ್ (ಗುಜರಾತ್): ಇಲ್ಲಿನ ದಹೇಜ್ ಪ್ರದೇಶದಲ್ಲಿರುವ ‘ಗುಜರಾತ್ ಫ್ಲೊರೊಕೆಮಿಕಲ್ ಲಿಮಿಟೆಡ್’ (ಜಿಎಫ್ಎಲ್) ಎಂಬ ಕಂಪನಿಯ ಘಟಕದಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.

‘ಶನಿವಾರ ರಾತ್ರಿ 8ರ ಸುಮಾರಿಗೆ ಅನಿಲ ಸೋರಿಕೆಯಾಗಿದೆ. ತಕ್ಷಣವೇ ತಜ್ಞರ ತಂಡವು ಸೋರಿಕೆಯನ್ನು ತಡೆದಿದೆ. ಪ್ರಜ್ಞೆ ತಪ್ಪಿದ್ದ ನಾಲ್ವರು ಕಾರ್ಮಿಕರಿಗೆ ನಮ್ಮ ಘಟಕದಲ್ಲಿರುವ ಆರೋಗ್ಯ ಕೇಂದ್ರದಲ್ಲಿಯೇ ಪ್ರಥಮ ಚಿಕಿತ್ಸೆಯನ್ನೂ ನೀಡಲಾಯಿತು. ಬಳಿಕ ಭರೂಚ್ನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು’ ಎಂದು ಕಂಪನಿ ವಿವರಿಸಿದೆ.

‘ನಮ್ಮ ಎಲ್ಲ ಪ್ರಯತ್ನಗಳ ಬಳಿಕವೂ ಕಾರ್ಮಿಕರು ಮೃತಪಟ್ಟರು. ಮೃತರ ಕುಟುಂಬಗಳಿಗೆ ₹30 ಲಕ್ಷ ನೀಡುತ್ತೇವೆ’ ಎಂದೂ ಕಂಪನಿ ಹೇಳಿದೆ. ಮೃತ ನಾಲ್ವರು ಕಾರ್ಮಿಕರ ಪೈಕಿ ಮೂವರು ಬೇರೆ ರಾಜ್ಯದವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.