ನವದೆಹಲಿ: ದೇಶದ ಶೇ 44ರಷ್ಟು ನಗರಗಳು ವಾಯುಮಾಲಿನ್ಯದ ತೀವ್ರತೆ ಎದುರಿಸುತ್ತಿವೆ. ಮಾಲಿನ್ಯ ಹೊರಸೂಸುವಿಕೆಯ ಮೂಲಗಳಿಂದ ಉಂಟಾಗಬಹುದಾದ ದೀರ್ಘಕಾಲದ ರಚನಾತ್ಮಕ ಸಮಸ್ಯೆಗಳನ್ನು ಇದು ಸೂಚಿಸುತ್ತಿದೆ ಎಂದು ಇಂಧನ ಮತ್ತು ಶುದ್ಧ ಗಾಳಿ ಸಂಶೋಧನಾ ಕೇಂದ್ರ (ಸಿಆರ್ಇಎ) ವಿಶ್ಲೇಷಣಾ ವರದಿಯಲ್ಲಿ ಎಚ್ಚರಿಸಿದೆ.

ಶೇ 44ರಷ್ಟು ಮಾಲಿನ್ಯ ನಗರಗಳಲ್ಲಿ ಶೇ 4ರಷ್ಟು ನಗರಗಳು ಮಾತ್ರ ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮದ (ನ್ಯಾಷನಲ್ ಕ್ಲೀನ್ ಏರ್ ಪ್ರೋಗ್ರಾಮ್–ಎನ್ಸಿಎಪಿ) ಭಾಗವಾಗಿವೆ ಎಂದು ವರದಿ ಹೇಳಿದೆ.

ಉಪಗ್ರಹ ದತ್ತಾಂಶವನ್ನು ಆಧರಿಸಿ ಭಾರತದ 4,041 ನಗರಗಳ ಪಿಎಂ2.5(ಗಾಳಿಯಲ್ಲಿರುವ 2.5 ಮೈಕ್ರಾನ್ಗಳಿಗಿಂತ ಚಿಕ್ಕ ಕಣಗಳ ಸಾಂದ್ರತೆ–ವಾಹನ, ಕಾರ್ಖಾನೆಗಳ ದೂಳು, ಹೊಗೆಯ ಕಣ) ಮಟ್ಟವನ್ನು ಸಿಆರ್ಇಎ ಅಧ್ಯಯನ ಮಾಡಿದೆ.

‘4,041 ನಗರಗಳ ಪೈಕಿ 1,787 ನಗರಗಳು (ಬಹುತೇಕ ಉತ್ತರ ಮತ್ತು ಮಧ್ಯ ಭಾರತ) ಕಳೆದ ಐದು ವರ್ಷಗಳಲ್ಲಿ (2019–24) ಪ್ರತಿವರ್ಷವೂ ರಾಷ್ಟ್ರೀಯ ವಾರ್ಷಿಕ ಪಿಎಂ2.5 ಗುಣಮಟ್ಟಕ್ಕಿಂತ ಕೆಳಗಿವೆ. ಇದು ದೀರ್ಘಕಾಲದಲ್ಲಿ ಮಾಲಿನ್ಯ ಸಮಸ್ಯೆಗಳಿಗೆ ಕಾರಣವಾಗಿದೆ. 130 ನಗರಗಳು ಮಾತ್ರ ರಾಷ್ಟ್ರೀಯ ಶುದ್ಧಗಾಳಿ ಕಾರ್ಯಕ್ರಮದ ಅಡಿಯಲ್ಲಿವೆ. 2025ರ ವಾಯು ಮಾಲಿನ್ಯ ರ್ಯಾಂಕಿಂಗ್ನಲ್ಲಿ ಅಸ್ಸಾಂನ ಬೈರ್ನಿಹಟ್ಗೆ ಮೊದಲ ಸ್ಥಾನ, ದೆಹಲಿ ಮತ್ತು ಗಾಜಿಯಾಬಾದ್ ನಂತರದ ಸ್ಥಾನಗಳಲ್ಲಿವೆ’ ಎಂದು ವರದಿ ಹೇಳಿದೆ.

ದೇಶದ ವಾಯು ಗುಣಮಟ್ಟ ಬಲಪಡಿಸಲು ವೈಜ್ಞಾನಿಕ ಆಧಾರಿತ ಸುಧಾರಣೆಗಳ ಅಗತ್ಯ ಇದೆ ಎಂದು ಸಿಆರ್ಇಎನ ವಿಶ್ಲೇಷಕ ಮನೋಜ್ ಕುಮಾರ್ ಹೇಳಿದ್ದಾರೆ.

15ನೇ ಹಣಕಾಸು ಆಯೋಗದ ಅನುದಾನದಡಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಎನ್ಸಿಎಪಿಗೆ ₹13,415 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ₹ 9,929 ಕೋಟಿ ಮಾತ್ರ ಬಳಕೆ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.