ಚೆನ್ನೈ : ಆರ್.ಕೆ.ನಗರ ಉಪಚುನಾವಣೆ ಸೋಲಿನ ಬಳಿಕ ಪಕ್ಷವಿರೋಧಿ ಚಟುವಟಿಕೆ ನಡೆಸಿದ ಕೊಯಮತ್ತೂರಿನ ಲೋಕಸಭಾ ಸಂಸದ ಪಿ.ನಾಗರಾಜನ್ ಅವರನ್ನು ಪಕ್ಷದ ಹುದ್ದೆಯಿಂದ ತೆರವುಗೊಳಿಸಲಾಗಿದೆ. ಅದೇ ರೀತಿ ಕಾಂಚೀಪುರ ಜಿಲ್ಲೆಯ ಪಕ್ಷದ ಪದಾಧಿಕಾರಿಗಳನ್ನೂ ವಜಾಗೊಳಿಸಲಾಗಿದೆ.

ಎಐಎಡಿಎಂಕೆ ಸಂಚಾಲಕ ಓ.ಪನೀರ್‌ಸೆಲ್ವಂ ಮತ್ತು ಸಹಸಂಚಾಲಕ ಕೆ.ಪಳನಿಸ್ವಾಮಿ ನೀಡಿರುವ ಜಂಟಿ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ‘ಪಕ್ಷದ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆದುಕೊಂಡ, ಪಕ್ಷಕ್ಕೆ ಅಗೌರವ ತೋರಿದ ಕಾರಣಕ್ಕೆ 155 ಪದಾಧಿಕಾರಿಗಳನ್ನು ವಜಾಗೊಳಿಸಲಾಗಿದೆ. 137 ಮಂದಿ ಕಾಂಚೀಪುರ ಜಿಲ್ಲೆಗೆ ಸೇರಿದವರಾಗಿದ್ದು, 18 ಮಂದಿ ಕೊಯಂಬತ್ತೂರ ನಗರ ಘಟಕಕ್ಕೆ ಸೇರಿದವರು’ ಎಂದು ತಿಳಿಸಲಾಗಿದೆ.

ಸೋಮವಾರ ಶಿವಗಂಗಾ ಜಿಲ್ಲೆಯ ಇಬ್ಬರು ನಾಯಕರು ಹಾಗೂ 117 ಪದಾಧಿಕಾರಿಗಳನ್ನು ಪಕ್ಷದಿಂದ ವಜಾಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.