ಮಹಾತ್ಮ ಗಾಂಧಿ ನೆನಪಿನ ಕಾರ್ಯಕ್ರಮಗಳನ್ನು ದೇಶದಾದ್ಯಂತ ನಡೆಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 116 ಸದಸ್ಯರಿರುವ ಸಮಿತಿ ರಚಿಸಲಾಗುವುದು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಗಾಂಧಿ ಅನುಯಾಯಿಗಳು, ಎಲ್ಲಾ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳು ಸಮಿತಿಯಲ್ಲಿರುತ್ತಾರೆ ಎಂದು ಜೇಟ್ಲಿ ತಿಳಿಸಿದ್ದಾರೆ.