ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವತೆಗೆ ಚೂಡಿದಾರ ತೋಡಿಸಿದ ಅರ್ಚಕರ ಅಮಾನತು

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನಾಗಪಟ್ಟಿಣಂ, ತಮಿಳುನಾಡು : ಇಲ್ಲಿನ ಮಯಿಲಾದುತುರೈನಲ್ಲಿರುವ ದೇವಸ್ಥಾನದಲ್ಲಿನ ಮೂರ್ತಿಗೆ (ದೇವತೆ) ಚೂಡಿದಾರ ತೋಡಿಸಿದ ಇಬ್ಬರು ಅರ್ಚಕರನ್ನು ದೇವಸ್ಥಾನದ ಆಡಳಿತ ಮಂಡಳಿ ಅಮಾನತು ಮಾಡಿದೆ.

ಇದೇ ಅರ್ಚಕರು ಜನವರಿ 26ರಂದು ನಡೆದ ವಿಶೇಷ ಪೂಜಾ ಕಾರ್ಯಕ್ರಮಕ್ಕಾಗಿ ಗುಜರಾತ್‌ ಶೈಲಿಯಂತೆ ದೇವತೆಗೆ ಅಲಂಕಾರ ಮಾಡಿದ್ದರು. ಅದಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜನಗೊಂಡ ಇಬ್ಬರು, ಇದೇ ತಿಂಗಳ 2ರಂದು ಮೂರ್ತಿಗೆ ಗಂಧ ಲೇಪಿಸಿ, ಚೂಡಿದಾರ ತೋಡಿಸಿ ಅಲಂಕಾರ ಮಾಡಿದ್ದರು. 

ಅಲಂಕಾರಗೊಂಡ ಮೂರ್ತಿಯ ಛಾಯಾಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ದೇವತೆಗೆ ಮಾಡಿದ ಅಲಂಕಾರವು ‘ಅಗಮಾ’ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ದೇವಾಲಯದ ಕೆಲ ಅಧಿಕಾರಿಗಳು ಹಾಗೂ ಭಕ್ತರು ಅಭಿಪ್ರಾಯಪಟ್ಟಿದ್ದಾರೆ. ಈ ಬೆಳವಣಿಗೆಯ ನಂತರ ಆಡಳಿತ ಮಂಡಳಿಯ ಇಬ್ಬರನ್ನು ಅಮಾನತುಗೊಳಿಸಿ ಸೋಮವಾರ ಆದೇಶಿಸಿದೆ.

‘ಅಗಮಾ’ ಸಂಪ್ರದಾಯದಲ್ಲಿ ದೇವತೆಯ ಮೂರ್ತಿಗೆ ಕೇವಲ ಸೀರೆ ತೋಡಿಸಿ ಅಲಂಕರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT