ಕಾನ್ಪುರ: ರೊಟೊಮ್ಯಾಕ್ ಪೆನ್ ತಯಾರಿಕಾ ಕಂಪನಿಯ ನಿರ್ದೇಶಕ ವಿಕ್ರಮ್ ಕೊಠಾರಿ ವಿರುದ್ಧ ₹3,695 ಕೋಟಿ ವಂಚನೆಯ ಆರೋಪದ ದೂರು ದಾಖಲಿಸಿಕೊಂಡಿರುವ ಸಿಬಿಐ, ವಿಕ್ರಮ್ ಕೊಠಾರಿ ನಿವಾಸದ ಮೇಲೆ ದಾಳಿ ನಡೆಸಿದ್ದು, ಮಂಗಳವಾರವೂ ಶೋಧ ಕಾರ್ಯ ಮುಂದುವರಿಸಿದೆ.
ಸೋಮವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ಸತತ 20 ತಾಸುಗಳು ಕಳೆದರೂ ತನಿಖೆ ಮುಂದುವರಿಸಿದ್ದಾರೆ. ಸಿಬಿಐನ ಎರಡು ತಂಡಗಳು ಮನೆಯಲ್ಲಿ ಶೋಧ ನಡೆಸುತ್ತಿವೆ.