ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ₹11,344 ಕೋಟಿ ವಂಚನೆ ಮಾಡಿರುವ ನೀರವ್ ಮೋದಿ ಪ್ರಕರಣ ತನಿಖೆ ನಡೆಯುತ್ತಿರುವ ಬೆನ್ನಲೆ ದೇಶದ ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಕಾರು ಖರೀದಿಸಲು ಪಿಎನ್ಬಿ ಬ್ಯಾಂಕಿನಿಂದ ₹5000 ಸಾಲ ಪಡೆದಿದ್ದ ಸುದ್ದಿ ಬೆಳಕಿಗೆ ಬಂದಿದೆ.
ಶಾಸ್ತ್ರಿ ಅವರು 1964ರಲ್ಲಿ ಫಿಯೆಟ್ ಕಾರು ಖರೀದಿಸಲು ಪಿಎನ್ಬಿ ಬ್ಯಾಂಕಿನಿಂದ ₹5000 ಸಾಲ ಪಡೆದಿದ್ದರು. ಆದರೆ 1966ರ ಜ.11 ಅವರು ಮೃತಪಟ್ಟರು. ಬಳಿಕ ಸಾಲವನ್ನು ತಿರಿಸುವಂತೆ ಪಿಎನ್ಬಿ ಬ್ಯಾಂಕ್ ಅಧಿಕಾರಿಗಳು ಶಾಸ್ತ್ರಿ ಕುಂಟುಬಸ್ಥರಿಗೆ ಪತ್ರ ಬರೆದಿದ್ದರು.