ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯುನಲ್ಲಿ ‘ಬಸ್ತರ್: ದಿ ನಕ್ಸಲೈಟ್ ಸ್ಟೋರಿ’ ಚಿತ್ರ ಪೂರ್ವ ಪ್ರದರ್ಶನ

ಎಬಿವಿಪಿ ನಡೆಗೆ ಎಡ ಸಂಘಟನೆಗಳ ವಿದ್ಯಾರ್ಥಿಗಳಿಂದ ಪ್ರತಿರೋಧ
Published 13 ಮಾರ್ಚ್ 2024, 14:30 IST
Last Updated 13 ಮಾರ್ಚ್ 2024, 14:30 IST
ಅಕ್ಷರ ಗಾತ್ರ

ನವದೆಹಲಿ: ಆರ್‌ಎಸ್ಎಸ್‌ನ ವಿದ್ಯಾರ್ಥಿ ಘಟಕ ಎಬಿವಿಪಿ ಸಂಘಟನೆಯು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ‘ಬಸ್ತರ್: ದ ನಕ್ಸಲೈಟ್ ಸ್ಟೋರಿ’ ಎಂಬ ಚಿತ್ರದ ಪೂರ್ವ ಪ್ರದರ್ಶನ ನಡೆಸಿತು. 

ಈ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಸುದಿಪ್ತೊ ಸೇನ್ ಹಾಗೂ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ನಟಿ ಅದಾ ಶರ್ಮಾ ಭಾಗವಹಿಸಿದರು. ಚಿತ್ರ ಪ್ರದರ್ಶನ ತಡೆಯುವ ಉದ್ದೇಶದಿಂದ ಹಲವು ಬಾರಿ ವಿದ್ಯುತ್ ಕಡಿತಗೊಳಿಸಲಾಗಿತ್ತು ಎಂದು ಎಬಿವಿಪಿ ಆರೋಪಿಸಿದೆ.  ಆದರೆ, ಈ ಚಿತ್ರ ಪ್ರದರ್ಶನಕ್ಕೆ ಎಡಪಂಥೀಯ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 

ಈ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಜೆಎನ್‌ಯುಎಸ್‌ಯು ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಚಿತ್ರ ಪ್ರದರ್ಶನ ಮಾಡಿರುವುದು ಚುನಾವಣಾ ನೀತಿ ಸಂಹಿತೆಯ ಭಾಗಶಃ ಉಲ್ಲಂಘನೆ ಎಂದು ವಿಶ್ವವಿದ್ಯಾಲಯದ ಚುನಾವಣಾ ಸಮಿತಿ ಹೇಳಿದೆ. 

ಈ ಸಂಬಂಧ ಪ್ರತಿಕ್ರಿಯಿಸಿದ ಚುನಾವಣಾ ಸಮಿತಿಯ ಅಧ್ಯಕ್ಷ ಶೈಲೇಂದ್ರ ಕುಮಾರ್, ‘ಜೆಎನ್‌ಯುನ ಕಾನ್ವೆನ್ಷನ್ ಕೇಂದ್ರದಲ್ಲಿ ಬುಧವಾರ ‘ಬಸ್ತರ್: ದ ನಕ್ಸಲೈಟ್ ಸ್ಟೋರಿ’ ಪ್ರದರ್ಶನ ಮಾಡಿರುವುದು ಗೊತ್ತಾಗಿದೆ. ಈ ಕುರಿತು ನಮಗೆ ಯಾವುದೇ ಮಾಹಿತಿ ನೀಡರಲಿಲ್ಲ. ಜೊತೆಗೆ ಈ ಕಾರ್ಯಕ್ರಮ ಆಯೋಜನೆಗೆ ಅನುಮತಿಯನ್ನೂ ಪಡೆದಿರಲಿಲ್ಲ’ ಎಂದು ತಿಳಿಸಿದ್ದಾರೆ. 

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟಕ್ಕೆ ಇದೇ 22ರಂದು ಚುನಾವಣೆ ನಡೆಯಲಿದ್ದು, 24ರಂದು ಫಲಿತಾಂಶ ಪ್ರಕಟವಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT