ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಭಾರತದ ಏಳು ಮಂದಿಗೆ ಪ್ಯಾರಿಸ್‌ ಟಿಕೆಟ್‌

Published 30 ಏಪ್ರಿಲ್ 2024, 13:53 IST
Last Updated 30 ಏಪ್ರಿಲ್ 2024, 13:53 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ವಿಶ್ವ ಚಾಂಪಿಯುನ್ ಪಿ.ವಿ.ಸಿಂಧು ಸೇರಿದಂತೆ ಭಾರತದ ಏಳು ಮಂದಿ ಬ್ಯಾಡ್ಮಿಂಟನ್ ಸ್ಪರ್ಧಿಗಳು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್‌ ಗೇಮ್ಸ್‌ ಅರ್ಹತೆಗೆ ಬೇಕಾದ ರ್‍ಯಾಂಕಿಂಗ್ ಮಾನದಂಡಗಳ ಆಧಾರದಲ್ಲಿ ಈ ಏಳು ಮಂದಿಗೆ ಅವಕಾಶ ದೊರಕಿದೆ.

ಮಹಿಳಾ ವಿಭಾಗದಲ್ಲಿ ಸಿಂಧು ಮತ್ತು ಪುರುಷರ ವಿಭಾಗದಲ್ಲಿ ಎಚ್‌.ಎಸ್‌.ಪ್ರಣಯ್ ಅವರು ರ‍್ಯಾಂಕಿಂಗ್ ಆಧಾರದಲ್ಲಿ ಅರ್ಹತೆ ಪಡೆಯುವುದು ಈ ಹಿಂದೆಯೇ ಖಚಿತಗೊಂಡಿತ್ತು.

ಒಲಿಂಪಿಕ್‌ ಅರ್ಹತೆ ಸಂಬಂಧದ ಪ್ರಕ್ರಿಯೆಗಳನ್ನು ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ (ಬಿಡಬ್ಲ್ಯುಎಫ್‌) ಸೋಮವಾರ ಗಡುವಿನೊಳಗೆ ಪೂರ್ಣಗೊಳಿಸಿದೆ.

ಏಪ್ರಿಲ್‌ ರ‍್ಯಾಂಕಿಂಗ್ ಆಧಾರದಲ್ಲಿ ಪುರುಷರ ಮತ್ತು ಮಹಿಳಾ ವಿಭಾಗದ ಅಗ್ರ 16 ಆಟಗಾರರು ಮತ್ತು ಆಟಗಾರ್ತಿಯರು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಮಾನದಂಡಗಳ ಪ್ರಕಾರ, ಮಹಿಳಾ ಸಿಂಗಲ್ಸ್‌ ರ‍್ಯಾಂಕಿಂಗ್‌ನಲ್ಲಿ ಸಿಂಧು 12ನೇ ಸ್ಥಾನ ಪಡೆದಿದ್ದರೆ, ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಮತ್ತು ಲಕ್ಷ್ಯ ಸೇನ್ ಕ್ರಮವಾಗಿ 9 ಮತ್ತು 13ನೇ ಸ್ಥಾನ ಪಡೆದಿದ್ದಾರೆ. ಸಿಂಧು ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದಿದ್ದಾರೆ.

ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಒಲಿಂಪಿಕ್‌ ಕ್ವಾಲಿಫಿಕೇಷನ್‌ ಅಂತ್ಯದಲ್ಲಿ ಮೂರನೇ ಕ್ರಮಾಂಕದಲ್ಲಿದ್ದಾರೆ. ಡಬಲ್ಸ್‌ನಲ್ಲಿ ಪದಕದ ಭರವಸೆಯೊಡನೆ ಇವರಿಬ್ಬರು ಒಲಿಂಪಿಕ್ಸ್‌ಗೆ ತೆರಳಲಿದ್ದಾರೆ.

ಮಹಿಳಾ ಡಬಲ್ಸ್‌ನಲ್ಲಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ 13ನೇ ಸ್ಥಾನ ಪಡೆದ ಕಾರಣ ಅವರೂ ಅರ್ಹತೆ ಸಂಪಾದಿಸಿದರು. ಆದರೆ ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರಿಗೆ ಅವಕಾಶ ಕೈತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT