ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕೋಲ್ಕತ್ತ ನೈಟ್ ರೈಡರ್ಸ್ ತಂಡದಿಂದ ಹೊರಬಿದ್ದ ಬಾಂಗ್ಲಾದೇಶದ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರಿಗೆ ಯಾವುದೇ ಪರಿಹಾರದ ಮೊತ್ತ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಈಚೆಗೆ ನಡೆದಿದ್ದ ಮಿನಿ ಹರಾಜಿನಲ್ಲಿ ಕೋಲ್ಕತ್ತ ತಂಡವು ವೇಗದ ಬೌಲರ್ ರೆಹಮಾನ್ ಅವರನ್ನು ₹ 9.20 ಕೋಟಿಗೆ ಖರೀದಿಸಿತ್ತು.

ಆದರೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಹಿಂದೂ ಸಮುದಾಯದ ವ್ಯಕ್ತಿಗಳ ಹತ್ಯೆಯನ್ನು ಖಂಡಿಸಿದ್ದ ಭಾರತದ ರಾಜಕಾರಣಿಗಳು ಐಪಿಎಲ್ನಿಂದ ಮುಸ್ತಫಿಝುರ್ ಅವರನ್ನು ಕೈಬಿಡುವಂತೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ನೀಡಿದ ಸೂಚನೆಯನ್ನು ಕೋಲ್ಕತ್ತ ತಂಡ ಪಾಲಿಸಿತ್ತು.

‘ಎಲ್ಲ ಆಟಗಾರರ ವೇತನವನ್ನೂ ವಿಮೆ ಮಾಡಲಾಗಿರುತ್ತದೆ. ವಿದೇಶಿ ಆಟಗಾರರಿಗೆ ಫ್ರ್ಯಾಂಚೈಸಿಯು ವೇತನ ನೀಡುತ್ತದೆ. ತರಬೇತಿ ಶಿಬಿರ ಅಥವಾ ಪಂದ್ಯಗಳಲ್ಲಿ ಆಡುವ ಸಂದರ್ಭದಲ್ಲಿ ಗಾಯಗೊಂಡರೆ ಫ್ರ್ಯಾಂಚೈಸಿಯು ವೇತನ ಕೊಡುತ್ತದೆ. ಅದರಲ್ಲಿ ಶೇ 50ರಷ್ಟು ಹಣವನ್ನು ವಿಮೆ ಮೂಲಕ ಪಾವತಿಸಲಾಗಿರುತ್ತದೆ. ಭಾರತದ ಆಟಗಾರರು (ಕೇಂದ್ರ ಗುತ್ತಿಗೆಯಲ್ಲಿರುವವರು) ಗಾಯಗೊಂಡರೆ ಬಿಸಿಸಿಐ ಹಣ ಪಾವತಿಸುತ್ತದೆ’ ಎಂದು ಮೂಲಗಳು ತಿಳಿಸಿವೆ.

ಆದರೆ ಮುಸ್ತಫಿಝುರ್ ಪ್ರಕರಣ ಬೇರೆ ರೀತಿಯದ್ದು. ಅವರು ಗಾಯಗೊಂಡು ಅಥವಾ ಕ್ರಿಕೆಟ್ ಸಂಬಂಧಿತ ಯಾವುದೇ ಕಾರಣಕ್ಕೂ ಅವರು ಹೊರಹೋಗಿಲ್ಲ. ಆದ್ದರಿಂದ ಅವರಿಗೆ ವಿಮೆ ಅನ್ವಯಿಸುವುದಿಲ್ಲ. ಕೆಕೆಆರ್ ಕೂಡ ಯಾವುದೇ ಮೊತ್ತ ನೀಡಲು ಸಾಧ್ಯವಿಲ್ಲ.

ಪ್ರಕರಣ ನಡೆಯುತ್ತಿದ್ದಂತೆಯೇ ಬಾಂಗ್ಲಾ ಕ್ರಿಕೆಟ್ ಮಂಡಳಿ(ಬಿಸಿಬಿ)ಯು ಮುಸ್ತಫಿಝುರ್ ಅವರ ನಿರಾಕ್ಷೇಪಣೆ ಪತ್ರವನ್ನು ಹಿಂಪಡೆದಿದೆ. ಇದರಿಂದಾಗಿ ಅವರಿಗೆ ಪರಿಹಾರ ಸಿಗುವ ಸಾಧ್ಯತೆಯು ಮತ್ತಷ್ಟು ಕ್ಷೀಣವಾಗಿದೆ.