ಮುಲ್ಹೇಮ್ ಆನ್ ಡೆರ್ ರುಹುವಾ (ಜರ್ಮನಿ): ಅನುಭವಿ ಕಿದಂಬಿ ಶ್ರೀಕಾಂತ್ ಹಾಗೂ ವಿಶ್ವ ಜೂನಿಯರ್ ಚಾಂಪಿಯನ್ಷಿಪ್ ಬೆಳ್ಳಿ ವಿಜೇತೆ ತನ್ವಿ ಶರ್ಮಾ ಅವರು ಮಂಗಳವಾರ ಇಲ್ಲಿ ಆರಂಭವಾಗುವ ಜರ್ಮನ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸವಾಲು ಮುನ್ನಡೆಸಲಿದ್ದಾರೆ.

ಶ್ರೀಕಾಂತ್ ಅವರು ಕಳೆದ ಋತುವಿನಲ್ಲಿ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಹಾಗೂ ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ರನ್ನರ್ಸ್ಅಪ್ ಆಗಿದ್ದು, ಇಲ್ಲಿ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ.

16 ವರ್ಷ ವಯಸ್ಸಿನ ತನ್ವಿ ಮೊದಲ ಸುತ್ತಿನಲ್ಲಿ ಮಲೇಷ್ಯಾದ ವಾಂಗ್ ಲಿಂಗ್ ಶಿಂಗ್ ಅವರನ್ನು ಎದುರಿಸಲಿದ್ದಾರೆ. ತಮಗಿಂತಲೂ ಉನ್ನತ ಕ್ರಮಾಂಕದ ಆಟಗಾರ್ತಿಯರಿಗೆ ಸೋಲಿನ ಆಘಾತ ನೀಡಿರುವ ತನ್ವಿ, ಭಾರತದ ಭರವಸೆಯಾಗಿದ್ದಾರೆ.

ಕಿರಣ್ ಜಾರ್ಜ್ ಹಾಗೂ ತರುಣ್ ಮನ್ನೆಪಲ್ಲಿ ಅವರು ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಕ್ರಮವಾಗಿ ಕ್ರಿಸ್ಟೊ ಪಾಪೊವ್ (ಫ್ರಾನ್ಸ್) ಮತ್ತು ವಾಂಗ್ ಟ್ಝು ವೀಯಿ (ತೈವಾನ್) ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಮಾಳವಿಕಾ ಬನ್ಸೋಡ್, ಇಶಾರಾನಿ ಬರೂವಾ ಹಾಗೂ ತಸ್ನೀಮ್ ಮೀರ್ ಅವರು ಮಹಿಳೆಯರ ಸಿಂಗಲ್ಸ್ನಲ್ಲಿ ಕಣದಲ್ಲಿರುವ ಭಾರತದ ಪ್ರಮುಖರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.