ದಿನ ಭವಿಷ್ಯ: ಈ ರಾಶಿಯವರ ಬಹುದಿನಗಳ ಕನಸು ಸಾಕಾರಗೊಳ್ಳಲಿದೆ..
Published 22 ಫೆಬ್ರುವರಿ 2026, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹುದಿನಗಳ ಕನಸು ಸಾಕಾರಗೊಳ್ಳಲಿದೆ. ಪ್ರಾಮಾಣಿಕತೆ, ಬುದ್ಧಿವಂತಿಕೆ, ಕೆಲಸದಲ್ಲಿನ ಶಿಸ್ತು ಉತ್ತಮ ಹುದ್ದೆಯನ್ನು ಅಲಂಕರಿಸಲು ಸಹಾಯ ಮಾಡಲಿದೆ. ಏಕಾಗ್ರತೆಗೆ ಭಂಗವಾಗಬಹುದು.
22 ಫೆಬ್ರುವರಿ 2026, 23:30 IST
ವೃಷಭ
ವಿವಾಹ ಅಪೇಕ್ಷಿಗಳಿಗೆ ಅನಿರೀಕ್ಷಿತವಾಗಿ ಸಹೋದರನ ಮುಖಾಂತರ ವೈವಾಹಿಕ ಸಂಬಂಧವೊಂದು ಕೂಡಿ ಬರಲಿದೆ. ಸೋಲನ್ನು ಬಯಸುವವರ ಸಂಖ್ಯೆಯು ಇಳಿಮುಖವನ್ನು ಹೊಂದುವುದು.
22 ಫೆಬ್ರುವರಿ 2026, 23:30 IST
ಮಿಥುನ
ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲಾ ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ನಿರ್ಲಿಪ್ತತೆಯಿಂದ ಸದ್ಯದ ಸಮಸ್ಯೆಗಳು ಪರಿಹಾರ ಕಾಣಲಿವೆ. ಕೈಯಲ್ಲಿ ಹಣ ಇರುವುದರಿಂದ ಬಾಕಿ ಇರಿಸಿದ ಕೆಲಸಗಳ ಬಗ್ಗೆ ಗಮನಹರಿಸಿ.
22 ಫೆಬ್ರುವರಿ 2026, 23:30 IST
ಕರ್ಕಾಟಕ
ಅನಾಯಾಸದಿಂದ ಧನಾದಾಯವಿದ್ದರೂ ನಾನಾ ರೀತಿಯ ಅನವಶ್ಯಕ ಖರ್ಚು-ವೆಚ್ಚಗಳು ಆರ್ಥಿಕ ಬಿಕ್ಕಟ್ಟಿನ ಕಡೆಗೆ ಕಂಡೊಯ್ಯಲಿವೆ. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ವಿಚಲಿತಗೊಳ್ಳದೆ ಕೆಲಸವನ್ನು ನೆರವೇರಿಸಿ.
22 ಫೆಬ್ರುವರಿ 2026, 23:30 IST
ಸಿಂಹ
ಕಾರ್ಯಕ್ಷೇತ್ರದಲ್ಲಿ ಸ್ವಯಂ ಪರೀಕ್ಷೆಯ ಆರಂಭವಾಗುವುದು. ಹಾಗಾಗಿ ಎರಡೆರಡು ಬಾರಿ ಪರಿಶೀಲನೆ ಮಾಡುವುದು ಅಗತ್ಯ. ರಿಯಾಯಿತಿ ಮಾರಾಟಗಳಿಂದ ಮೋಸ ಹೋಗುವ ಸಾಧ್ಯತೆಗಳು ಇವೆ.
22 ಫೆಬ್ರುವರಿ 2026, 23:30 IST
ಕನ್ಯಾ
ಧೀಮಂತರ ಹಾಗೂ ಪ್ರಭಾವಿ ವ್ಯಕ್ತಿಯ ಸಹಕಾರದಿಂದ ಆಧ್ಯಾತ್ಮಿಕ ಕಾರ್ಯಕ್ರಮ ಉತ್ತಮವಾಗಿ ನೆರವೇರಿಸಿಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳಿಗೆ ಉತ್ತಮ ಮಾರಾಟ ಹಾಗೂ ಲಾಭವಾಗುವುದು.
22 ಫೆಬ್ರುವರಿ 2026, 23:30 IST
ತುಲಾ
ಬಾಲ್ಯ ಸ್ನೇಹಿತನಿಗಾಗಿ ಮನೆಯಲ್ಲಿ ವಿಶೇಷ ಭೋಜನದ ವ್ಯವಸ್ಥೆ ಸಂತೋಷ ಪೂರ್ವಕವಾಗಿ ನಡೆಯುವುದು. ಸಂಸಾರದಲ್ಲಿ ಕೆಲವು ಬದಲಾವಣೆಗಳನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬರುವುದು.
22 ಫೆಬ್ರುವರಿ 2026, 23:30 IST
ವೃಶ್ಚಿಕ
ಹತ್ತಾರು ವಿಷಯದಲ್ಲಿ ಗಮನ ಹರಿಸುವುದಕ್ಕಿಂತ ನಿರ್ದಿಷ್ಟವಾದ ಒಂದು ಗುರಿ ತಲುಪವಂಥ ಪ್ರಯತ್ನ ಮಾಡಿ. ಆದಾಯ ಮತ್ತು ತೆರಿಗೆ ಅಧಿಕಾರಿಗಳಿಗೆ ದಿಢೀರ್ ವರ್ಗಾವಣೆಯಾಗುವ ಸಂಭವವಿದೆ.
22 ಫೆಬ್ರುವರಿ 2026, 23:30 IST
ಧನು
ಮಗನ ಬೇಡಿಕೆಗಳನ್ನು ಪೂರೈಸುವ ಪ್ರಯತ್ನಕ್ಕೆ ಹಲವು ಅಡ್ಡಿ ಆತಂಕಗಳು ಎದುರಾಗಲಿವೆ. ಆಹಾರದಲ್ಲಿ ಆಗುವ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
22 ಫೆಬ್ರುವರಿ 2026, 23:30 IST
ಮಕರ
ದುಡ್ಡಿನ ವಿಷಯವಾಗಿ ದಂಪತಿಗಳಲ್ಲಿ ಭವಿಷ್ಯದ ಕುರಿತು ಗಂಭೀರವಾದ ಚರ್ಚೆ ನಡೆಯಲಿದೆ. ಪ್ರೀತಿ ಪಾತ್ರರಿಂದ ನೆಮ್ಮದಿ ತರುವಂಥ ಸನ್ನಿವೇಶಗಳು ನಡೆಯಲಿವೆ. ಆದಾಯಕ್ಕೆ ತಕ್ಕ ಜೀವನ ರೂಪಿಸಿಕೊಳ್ಳಿ.
22 ಫೆಬ್ರುವರಿ 2026, 23:30 IST
ಕುಂಭ
ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಯವರಲ್ಲಿ ಮಾತುಕತೆ ನಡೆಯಲಿವೆ. . ಟ್ರಾವೆಲ್ ಏಜೆನ್ಸಿಯನ್ನು ನಡೆಸುವವರಿಗೆ ಉತ್ತಮ ಆದಾಯ ಇರಲಿದೆ. ಮನೆಯ ಅಲಂಕಾರಗಳಿಗೆ ಹೇರಳ ಹಣ ವ್ಯಯಿಸುವಿರಿ.
22 ಫೆಬ್ರುವರಿ 2026, 23:30 IST
ಮೀನ
ಹೊಸ ಮನೆಯ ನಿರ್ಮಾಣದ ಕೆಲಸಗಳನ್ನು ಪೂರೈಸಿಕೊಳ್ಳುವ ಬಗ್ಗೆ ಗಮನವಿರಲಿ. ಹಣಕಾಸು ನಿರ್ವಹಣೆಯಲ್ಲಿರುವ ಕುಶಲಮತಿಗಳು ಸಮಯಕ್ಕೆ ಸರಿಯಾಗಿ ಸಹಾಯಕ್ಕೆ ಬರಲಿದ್ದಾರೆ.
22 ಫೆಬ್ರುವರಿ 2026, 23:30 IST