ಅಹಮದಾಬಾದ್: ಗುಜರಾತ್ನ ಉದಯೋನ್ಮುಖ ಜುಡೊ ಆಟಗಾರ ರೋಹಿತ್ ಮಜಗುಲ್ ಅವರು ವರ್ಷಾಂತ್ಯದಲ್ಲಿ ನಡೆಯಲಿರುವ ಕಾಮನ್ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ಗೆ ಅರ್ಹತೆ ಪಡೆದಿದ್ದಾರೆ.

22 ವರ್ಷ ವಯಸ್ಸಿನ ರೋಹಿತ್ ಅವರು ದೆಹಲಿಯಲ್ಲಿ ಭಾನುವಾರ ಮುಕ್ತಾಯಗೊಂಡ ಆಯ್ಕೆ ಟ್ರಯಲ್ಸ್ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದರು. ಅವರು ಕಳೆದ ಎರಡು ವರ್ಷಗಳಲ್ಲಿ ನಡೆದ ಸೀನಿಯರ್ ನ್ಯಾಷನಲ್ಸ್ ಕೂಟದ 66 ಕೆ.ಜಿ. ವಿಭಾಗದಲ್ಲಿ ಸೋಲಿಲ್ಲದ ಸರದಾರನಾಗಿದ್ದಾರೆ.

ಗುಜರಾತ್ನ ಗೀರ್ ಸೋಮನಾಥ್ ಜಿಲ್ಲೆಯ ಬುಡಕಟ್ಟು ಸಮುದಾಯದ ಪ್ರತಿಭಾನ್ವಿತ ಆಟಗಾರ ಗೋಧಾವಿಯ ವಿಜಯಿ ಭಾರತ್ ಫೌಂಡೇಷನ್ನಲ್ಲಿ ನಾಲ್ಕು ವರ್ಷಗಳಿಂದ ತರಬೇತಿ ಪಡೆಯುತ್ತಿದ್ದಾರೆ.