ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್8 ಪಂದ್ಯವನ್ನು ಭಾರತ ತಂಡವು ಹೀನಾಯವಾಗಿ ಸೋತು ನಿರಾಸೆ ಅನುಭವಿಸಿದೆ. ಆ ಮೂಲಕ ಸೆಮಿಫೈನಲ್ ತಲುಪುವ ದಾರಿ ಹೇಗೆ ಎಂಬುದನ್ನು ಯೋಚಿಸಲಿದೆ.

ಸೂಪರ್–8ರ ಹಂತದಲ್ಲಿ ಪ್ರತೀ ಗುಂಪಿನಲ್ಲಿ 4 ತಂಡಗಳಿದ್ದು, ಪ್ರತಿ ತಂಡವು ಮೂರು ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಅಗ್ರಸ್ಥಾನದಲ್ಲಿ ಉಳಿಯುವ ಎರಡು ತಂಡಗಳು ಸೆಮಿಫೈನಲ್ ತಲುಪಲಿವೆ. ಸದ್ಯ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಸೋತಿರುವ ಟೀಂ ಇಂಡಿಯಾಗೆ ಸೆಮಿಫೈನಲ್ ತಲುಪುವ ಅವಕಾಶ ಇನ್ನೂ ಇದೆ.

ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯವಾಗಿ ಸೋತಿರುವುದರಿಂದ ನೆಟ್ ರನ್ ರೇಟ್ (NRR)-3.800 ಗೆ ಕುಸಿದಿದೆ. ಹಾಗಾಗಿ, ಮುಂದಿನ ಎರಡು ಪಂದ್ಯಗಳನ್ನು ದೊಡ್ಡ ಅಂತರದ ಗೆಲುವು ಸಾಧಿಸಿದರೆ ಮಾತ್ರ ಸೆಮಿಫೈನಲ್ ಪ್ರವೇಶ ಪಡೆಯಬಹುದು. ಮಾತ್ರವಲ್ಲ, ಉಳಿದ ತಂಡಗಳ ಗೆಲುವು– ಸೋಲುಗಳು ಭಾರತದ ಸೆಮಿಫೈನಲ್ ಹಾದಿಯನ್ನು ನಿರ್ಧರಿಸಲಿದೆ.

ತಂಡಗಳ ಫಲಿತಾಂಶ: ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಜಿಂಬಾಂಬ್ವೆ ತಂಡಗಳನ್ನು ಸೋಲಿಸಲೇಬೇಕು, ಹಾಗೂ ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ಹಾಗೂ ಜಿಂಬಾಂಬ್ವೆ ಎರಡೂ ತಂಡಗಳನ್ನು ಸೋಲಿಸಿದರೆ, ಭಾರತ ತಂಡ ಯಾವುದೇ ಸಮಸ್ಯೆ ಇಲ್ಲದೆ ಎರಡನೇ ತಂಡವಾಗಿ ಸೆಮಿಫೈನಲ್ಗೆ ತಲುಪಲಿದೆ.

ಭಾರೀ ಅಂತರದ ಗೆಲುವು: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯವನ್ನು ಹೀನಾಯವಾಗಿ ಸೋತಿರುವ ಭಾರತ ತಂಡವು ಉಳಿದಿರುವ ಎರಡು ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಆ ಮೂಲಕ, ತಂಡ ವೆಸ್ಟ್ ಇಂಡೀಸ್ ಅಥವಾ ಜಿಂಬಾಂಬ್ವೆ ತಂಡಗಳು ಎರಡು ಪಂದ್ಯಗಳನ್ನು ಗೆದ್ದರೂ ರನ್ರೇಟ್ ಆಧಾರದಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಬಹುದು.

ಎರಡು ಪಂದ್ಯಗಳ ಗೆಲುವು: ಭಾರತ ತಂಡಕ್ಕೆ ಬೇಕಿರುವುದು ಪ್ರಮುಖವಾಗಿ ಮುಂದಿನ ಎರಡೂ ಪಂದ್ಯಗಳನ್ನು ಗೆಲ್ಲುವುದು, ಒಂದುವೇಳೆ ಯಾವುದೇ ಒಂದು ತಂಡದ ವಿರುದ್ಧ ಸೋತರೂ ಕೂಡ ಸೂಪರ್–8ರ ಹಂತದಲ್ಲಿ ಟೂರ್ನಿಯಿಂದ ಹೊರಬೀಳಲಿದೆ.

ರನ್ರೇಟ್ ಹೆಚ್ಚಿಸಿಕೊಳ್ಳುವ ಅನಿವಾರ್ಯತೆ: ಭಾರತ ತಂಡವು ದಕ್ಷಿಣ ಆಫ್ರಿಯಾ ವಿರುದ್ಧ 76ರನ್ಗಳ ಬೃಹತ್ ಸೋಲು ಅನುಭವಿಸಿರುವುದರಿಂದ ಜಿಂಬಾಂಬ್ವೆ ಹಾಗೂ ವೆಸ್ಟ್ ಇಂಡೀಸ್ ಎರಡೂ ತಂಡಗಳ ವಿರುದ್ಧ ಬೃಹತ್ ಅಂತರದ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಇದೆ. ಆಗ ಯಾವುದೇ ಮೂರು ತಂಡವು ತಲಾ ಎರಡು ಪಂದ್ಯಗಳನ್ನು ಗೆದ್ದರೆ, ರನ್ರೇಟ್ ಆಧಾರದಲ್ಲಿ ಭಾರತವೇ ಸೆಮಿಫೈನಲ್ ತಲುಪಲಿದೆ.

ದಕ್ಷಿಣ ಆಫ್ರಿಕಾ ತಂಡವು ಮುಂದಿನ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ಅಥವಾ ಜಿಂಬಾಂಬ್ವೆ ತಂಡಗಳ ವಿರುದ್ಧದ ಪಂದ್ಯದಲ್ಲಿ, ಯಾವುದೇ ಒಂದು ತಂಡವನ್ನು ಸೋಲಿಸಲು ವಿಫಲವಾದರೆ, ವಿಂಡೀಸ್ ಮತ್ತು ಜಿಂಬಾಂಬ್ವೆ ತಂಡಗಳ ನಡುವಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಸಾಧಿಸಿದ ತಂಡವೇ ಗೆದ್ದರೆ, ಭಾರತ ತಂಡವು ಜಿಂಬಾಂಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿದರೂ, ಸೆಮಿಫೈನಲ್ ತಲುಪಲು ರನ್ರೇಟ್ ಮೊರೆ ಹೋಗಬೇಕಾಗುತ್ತದೆ.
.ಹರಿಣಗಳ ದಾಳಿಗೆ ಭಾರತ ನಿರುತ್ತರ: ದಕ್ಷಿಣ ಆಫ್ರಿಕಾ ತಂಡಕ್ಕೆ 76 ರನ್ಗಳ ಭಾರಿ ಜಯ.ಟಿ20 ವಿಶ್ವಕಪ್ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಜಸ್ಪ್ರೀತ್ ಬೂಮ್ರಾ .
ಭಾರತ ತಂಡದ ಮುಂದಿನ ಪಂದ್ಯಗಳು

ಫೆಬ್ರುವರಿ 26, ಭಾರತ ಮತ್ತು ಜಿಂಬಾಂಬ್ವೆ (ಸಂಜೆ 7ಕ್ಕೆ)

ಮಾರ್ಚ್ 1, ಭಾರತ ಮತ್ತು ವೆಸ್ಟ್ ಇಂಡೀಸ್ (ಸಂಜೆ 7ಕ್ಕೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.