ಮುಂಬೈ: ಬುಧವಾರ ಬೆಳಿಗ್ಗೆ ಪುಣೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ಲಿಯರ್ಜೆಟ್ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದು, ಭಾರತದ ಸವಾಲಿನ ಟೇಬಲ್ ಟಾಪ್ ವಾಯುನೆಲೆಗಳಲ್ಲಿನ ವಾಯುಯಾನ ಅಪಾಯಗಳ ಕುರಿತು ಮರುಪರಿಶೀಲನೆಗೆ ಒತ್ತಾಯಿಸಿದೆ ಎಂದು ವರದಿ ತಿಳಿಸಿದೆ.

ಈ ದುರ್ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಮತ್ತು ವಿಮಾನದ ಸಿಬ್ಬಂದಿ ಸೇರಿದಂತೆ ಐದು ಜನರು ಮೃತಪಟ್ಟಿದ್ದು, ಟೇಬಲ್ ಟಾಪ್ ರನ್ವೇಗಳ ಅಪಾಯವನ್ನು ತೆರೆದಿಟ್ಟಿತು ಎಂದು ವರದಿ ತಿಳಿಸಿದೆ.

ಪವಾರ್ ಅವರ ವಿಮಾನವು ಬಾರಾಮತಿ ವಿಮಾನ ನಿಲ್ದಾಣದಲ್ಲಿ ಎರಡನೇ ಬಾರಿ ಲ್ಯಾಂಡಿಂಗ್ಗೆ ಪ್ರಯತ್ನಿಸುತ್ತಿದ್ದಾಗ ಅಪಘಾತಕ್ಕೀಡಾಯಿತು ಎಂದು ಫ್ಲೈಟ್ ಟ್ರ್ಯಾಕಿಂಗ್ ವೆಬ್ಸೈಟ್ ಫ್ಲೈಟ್ರಾಡರ್ 24 ಹೇಳುತ್ತದೆ. ಡಿಜಿಸಿಎ ಪ್ರಕಾರ, ಇದು ಟೇಬಲ್ಟಾಪ್ ರನ್ವೇ ಆಗಿದೆ.

ಬಾರಾಮತಿ ರನ್ವೇ ಚಿಕ್ಕದಾಗಿದ್ದು, ಐಎಲ್ಎಸ್ (ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್) ಸೌಲಭ್ಯಗಳನ್ನು ಹೊಂದಿಲ್ಲ. ಪೈಲಟ್ ಹಸ್ತಚಾಲಿತವಾಗಿ ಗೋಚರತೆ ಆಧರಿಸಿ ಲ್ಯಾಂಡಿಂಗ್ಗೆ ಪ್ರಯತ್ನಿಸಬೇಕಾಯಿತು. ವಿಮಾನವು ನೇರವಾಗಿ ರನ್ವೇಗೆ ಇಳಿಯಲಿಲ್ಲ. ಲ್ಯಾಂಡಿಂಗ್ ಸಮಯದಲ್ಲಿ ಟೇಬಲ್ಟಾಪ್ ರನ್ವೇಯ ಅಂಚಿನ ಬಳಿ ಅಪ್ಪಳಿಸಿತು ಎಂದು ವರದಿ ತಿಳಿಸಿದೆ.

ಮುಂಬೈನಿಂದ ಹಾರಾಟ ನಡೆಸುತ್ತಿದ್ದ ವಿಟಿ–ಎಸ್ಎಸ್ಕೆ ಕಂಪನಿಯ ಲಿಯರ್ಜೆಟ್ 45, ಸರಾಸರಿ ಸಮುದ್ರ ಮಟ್ಟದಿಂದ 604 ಮೀಟರ್ ಎತ್ತರದಲ್ಲಿರುವ 1,770 ಮೀಟರ್ ರನ್ವೇಯಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡಿತು. ಇದು ಸುಧಾರಿತ ಲ್ಯಾಂಡಿಂಗ್ ಸಾಧನಗಳಿಲ್ಲದೆ ಸಂಭವಿಸಿದ ಅವಘಡವಾಗಿದೆ ಎಂದೂ ವರದಿ ತಿಳಿಸಿದೆ

ವಿಮಾನವು ರನ್ವೇ ಅಂಚಿಗೆ ಗುದ್ದಿ ಪಕ್ಕಕ್ಕೆ ಸರಿದಾಗ ಬೆಂಕಿಗೆ ಆಹುತಿಯಾಯಿತು. 4-5 ಸ್ಫೋಟಗಳು ಸಂಭವಿಸಿದವು.ಈ ಸಂಬಂಧ ನಾಗರಿಕ ವಿಮಾನಯಾನ ನಿರ್ದೇಶನಾಲಯವು(ಡಿಜಿಸಿಎ) ಸಂಭಾವ್ಯ ಹವಾಮಾನ ಅಂಶಗಳು, ತಾಂತ್ರಿಕ ದೋಷಗಳು ಮತ್ತು ಕಾರ್ಯಾಚರಣೆಯ ದೋಷಗಳ ಬಗ್ಗೆ ತ್ವರಿತವಾಗಿ ತನಿಖೆಯನ್ನು ಆರಂಭಿಸಿದೆ.

ನುರಿತ ಪೈಲಟ್ ಬೇಕು

ಭಾರತದಲ್ಲಿ ಪ್ರಮುಖ ಟೇಬಲ್ಟಾಪ್ ರನ್ವೇಗಳು ಇರುವುದು ಮಂಗಳೂರು, ಕೋಯಿಕೋಡ್, ಲೆಂಗ್ಪುಯ್, ಶಿಮ್ಲಾ ಮತ್ತು ಪಕ್ಯಾಂಗ್ನಲ್ಲಿ. ಬಾರಾಮತಿ ಏರ್ಪೋರ್ಟ್ ಪ್ರಮುಖ ಟೇಬಲ್ಟಾಪ್ ರನ್ವೇ ಅಲ್ಲವಾದರೂ, ನಿನ್ನೆಯ ಅಪಘಾತ ದುರಂತ ಘಟನೆಯು ಇಂಥ ರನ್ವೇಗಳ ವಿನ್ಯಾಸದ ಬಗ್ಗೆ ದೃಷ್ಟಿ ನೆಡುವಂತೆ ಮಾಡಿದೆ. ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಟೇಬಲ್ಟಾಪ್ ರನ್ವೇಗಳಲ್ಲಿ ವಿಮಾನ ಇಳಿಸುವುದು ನಿಜಕ್ಕೂ ಬಹಳ ಅಪಾಯಕಾರಿ ಕೆಲಸ. ಪೈಲಟ್ಗಳು ಸ್ವಲ್ಪ ತಪ್ಪು ಮಾಡಿದರೂ ಕಷ್ಟ. ವಿಮಾನ ಕೆಳಗಿಳಿಯುವ ಸಂದರ್ಭದಲ್ಲಿ ರನ್ವೇ ನೆಲ ವಾಸ್ತವಕ್ಕಿಂತ ಹೆಚ್ಚು ಹತ್ತಿರ ಇದ್ದಂತೆ ಕಾಣುತ್ತದೆ. ಗಾಳಿ, ಮಳೆ ಮತ್ತು ತಪ್ಪು ಅಂದಾಜು ಕಾರಣಕ್ಕೆ ವಿಮಾನಾಪಘಾತ ಎಡೆ ಮಾಡಿಕೊಡುವುದರಿಂದ ಈ ಕಾರ್ಯಗಳಿಗೆ ವಿಶೇಷ ತರಬೇತಿ ಕೊಡಬೇಕೆಂದು ಡಿಜಿಸಿಎ ಕಡ್ಡಾಯ ಮಾಡಿದೆ.

ಟೇಬಲ್ ಟಾಪ್ ರನ್ವೇಗಳಲ್ಲಿ ಹಲವು ಅಪಘಾತ

ಟೇಬಲ್ ಟಾಪ್ ರನ್ವೇಗಳಲ್ಲಿ ಈ ಹಿಂದೆ ಹಲವು ಅಪಘಾತಗಳ ಉದಾಹರಣೆಗಳಿವೆ. 2020ರ ಆಗಸ್ಟ್ ತಿಂಗಳಲ್ಲಿ ಮಾನ್ಸೂನ್ ಮಳೆ ಮತ್ತು ಕಡಿಮೆ ಗೋಚರತೆಯ ನಡುವೆ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಬೋಯಿಂಗ್ 737 ವಿಮಾನವು ಕೋಯಿಕ್ಕೋಡ್ನ ಟೇಬಲ್ಟಾಪ್ ರನ್ವೇಯನ್ನು ದಾಟಿ 35 ಅಡಿ ಆಳದ ಕಮರಿಗೆ ಉರುಳಿತ್ತು. ಈ ವೇಳೆ 21 ಜನರು ಸಾವಿಗೀಡಾಗಿದ್ದರು.

ಒಂದು ದಶಕದ ಹಿಂದೆ ಮಂಗಳೂರಿನಲ್ಲಿ, ಮತ್ತೊಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಎತ್ತರದ ರನ್ವೇಯಿಂದ ಹೊರಟು ಕಣಿವೆಗೆ ಉರುಳಿಬಿದ್ದು, 158 ಜನರು ಮೃತಪಟ್ಟಿದ್ದರು. ಇದಕ್ಕೆ ಪೈಲಟ್ ದೋಷವೇ ಕಾರಣ ಎಂದು ಆರೋಪಿಸಲಾಗಿದೆ. ನೇಪಾಳದ ಟೆನ್ಜಿಂಗ್-ಹಿಲರಿ ವಿಮಾನ ನಿಲ್ದಾಣವು ಇದೇ ರೀತಿ ಅಪಾಯಕಾರಿ ಭೂಪ್ರದೇಶ ಮತ್ತು ಹವಾಮಾನದಿಂದಾಗಿ ಅಪಘಾತಗಳನ್ನು ಕಂಡಿದೆ.

ಕೋಯಿಕೋಡ್ ನಿಲ್ದಾಣದ ಅಪಘಾತದ ನಂತರ, ವಿಮಾನಯಾನ ಅಧಿಕಾರಿಗಳು ರನ್ವೇ ಕುಶನ್ ವಿಸ್ತರಣೆಗಳು ಮತ್ತು ವರ್ಧಿತ ಸುರಕ್ಷತಾ ಪ್ರೋಟೋಕಾಲ್ಗಳನ್ನು ಶಿಫಾರಸು ಮಾಡಿದ್ದಾರೆ. ಬಫರ್ಡ್ ಸ್ಟ್ಯಾಂಡರ್ಡ್ ರನ್ವೇಗಳಿಗೆ ಹೋಲಿಸಿದರೆ ಈ ಟೇಬಲ್ ಟಾಪ್ ರನ್ವೇಗಳಲ್ಲಿ ಅಪಾಯದ ಸಾಧ್ಯತೆ ಹೆಚ್ಚಿರುತ್ತದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.