ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮಾಚಾರ ಆರೋಪ: ಮಹಿಳೆಯ ಕೊಲೆ, ಶವ ಸುಟ್ಟು ಹಾಕಿದ್ದ ಆರೋಪಿಗಳ ಬಂಧನ

Published 26 ಡಿಸೆಂಬರ್ 2023, 7:49 IST
Last Updated 26 ಡಿಸೆಂಬರ್ 2023, 7:49 IST
ಅಕ್ಷರ ಗಾತ್ರ

ಸೋನಿತ್‌ಪುರ: ಅಸ್ಸಾಂನ ಸೋನಿತ್‌ಪುರದಲ್ಲಿ ವಾಮಾಚಾರ ಮಾಡುತ್ತಿದ್ದ ಆರೋಪದಡಿ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಿ, ಆಕೆಯ ಶವವನ್ನು ಸುಟ್ಟು ಹಾಕಲಾಗಿದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ.

ಈ ಸಂಬಂಧ ಸುದ್ದಿಸಂಸ್ಥೆ ಪಿಟಿಐ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದೆ.

ಸಂತ್ರಸ್ತ ಮಹಿಳೆ ವಾಮಾಚಾರ ಮಾಡುತ್ತಿದ್ದ ಆರೋಪದಡಿ ಆಕೆಯನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ. ನಂತರ ಶವವನ್ನು ಸುಟ್ಟು ಹಾಕಲಾಗಿದೆ. ಸುಟ್ಟು ಹಾಕಿರುವ ಸ್ಥಳದ ದೃಶ್ಯ ವಿಡಿಯೊದಲ್ಲಿದೆ.

ಮಹಿಳೆ ಮೂರು ಮಕ್ಕಳ ತಾಯಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಅದೇ ಗ್ರಾಮದ ನಿವಾಸಿಗಳು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT