ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲೋಚನಾ ಜೀ .. ಸೌಮ್ಯ, ಕಾಳಜಿಯ ತಾಯಿ: ಅಮಿತಾಬ್ ಬಚ್ಚನ್ ಸಂತಾಪ

Published 5 ಜೂನ್ 2023, 4:56 IST
Last Updated 5 ಜೂನ್ 2023, 4:56 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ನಟಿ ಸುಲೋಚನಾ ಲಾಟ್ಕರ್ ನಿಧನಕ್ಕೆ ಬಿಗ್‌ಬಿ ಅಮಿತಾಬ್ ಬಚ್ಚನ್ ಕಂಬನಿ ಮಿಡಿದಿದ್ದಾರೆ. ಭಾರತೀಯ ಚಿತ್ರರಂಗ ಮತ್ತೊಬ್ಬ ಶ್ರೇಷ್ಠ ಕಾಲವಿದರನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಅಸಂಖ್ಯಾತ ತಾಯಿ ಪಾತ್ರಗಳ ಮೂಲಕ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿ ಗಮನ ಸೆಳೆದಿದ್ದ ಅವರು, ದೀರ್ಘಕಾಲದ ಅನಾರೋಗ್ಯದಿಂದ ಭಾನುವಾರ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

1974ರ ಮಜಬೂರ್ ಚಿತ್ರದಲ್ಲಿ ಸುಲೋಚನಾ ಜೊತೆ ನಟಿಸಿದ್ದ ಅಮಿತಾಬ್ ತಮ್ಮ ಬ್ಲಾಗ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

‘ನಮ್ಮ ಸಿನಿಮಾ ಜಗತ್ತಿನ ಮತ್ತೊಬ್ಬ ಶ್ರೇಷ್ಠರನ್ನು ನಾವು ಕಳೆದುಕೊಂಡಿದ್ದೇವೆ. 'ಸುಲೋಚನಾ ಜೀ .. ನನ್ನೊಂದಿಗೆ ಹಲವಾರು ಚಿತ್ರಗಳಲ್ಲಿ ನಟಿಸಿದ ಸೌಮ್ಯ, ಉದಾರ, ಕಾಳಜಿಯ ತಾಯಿ .. ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು .." ಎಂದು ಬಚ್ಚನ್ ಬರೆದಿದ್ದಾರೆ.

‘ಅವರ ಆರೋಗ್ಯದ ಕುರಿತಂತೆ ಕುಟುಂಬದಿಂದ ಮಾಹಿತಿ ಪಡೆಯುತ್ತಿದ್ದೆ.. ಆದರೆ, ಕೊನೆಗೆ ದುಃಖಕರ ಸುದ್ದಿ ಬಂದಿದೆ. ಅವರಿಗಾಗಿ ನಾವು ಪ್ರಾರ್ಥಿಸಬಹುದಷ್ಟ.. ಇದಕ್ಕಿಂತ ಹೆಚ್ಚು ಏನನ್ನೂ ಬರೆಯಲಾರೆ’ ಎಂದೂ ಅವರು ಹೇಳಿದ್ದಾರೆ.

‘ರೇಷ್ಮಾ ಔರ್ ಷೇರಾ’,ರೋಟಿ ಕಪಡ ಔರ್ ಮಕಾನ್, ಮುಖದ್ದರ್ ಕ ಸಿಕಂದರ್, ದೋಸ್ತಾನ ಮುಂತಾದ ಚಿತ್ರಗಳಲ್ಲಿ ಬಚ್ಚನ್ ಮತ್ತು ಸುಲೋಚನಾ ಒಟ್ಟಿಗೆ ನಟಿಸಿದ್ದಾರೆ.

1940ರಲ್ಲಿ ನಟನೆ ಆರಂಭಿಸಿದ ಸುಲೋಚನಾ, 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.

1960, 70 ಹಾಗೂ 80ರ ದಶಕಗಳಲ್ಲಿ ಬಾಲಿವುಡ್‌ನ ಹಲವು ಚಿತ್ರಗಳಲ್ಲಿ ಸುಲೋಚನಾ ತಾಯಿ ಮಾತ್ರ ನಿರ್ವಹಿಸಿದ್ದಾರೆ. ಬಚ್ಚನ್ ಅಲ್ಲದೆ ಬಾಲಿವುಡ್‌ನ ಬಹುತೇಕ ಪ್ರಮುಖ ನಟರ ಜೊತೆ ಅವರು ತೆರೆ ಹಂಚಿಕೊಂಡಿದ್ದರು.

1928ರ ಜುಲೈ 30ರಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಖಡಕ್ಲಾತ ಗ್ರಾಮದಲ್ಲಿ ಜನಿಸಿದ್ದ ಅವರು, 1946ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಅಶೋಕ್‌ಕುಮಾರ್, ದಿಲೀಪ್‌ಕುಮಾರ್, ರಾಜ್‌ಕಪೂರ್‌ ಹಾಗೂ ದೇವಾನಂದ್ ಸೇರಿದಂತೆ ಖ್ಯಾತನಟರೊಂದಿಗೆ ನಟಿಸಿದ್ದರು. 1999ರಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದ ಅವರಿಗೆ 2004ರಲ್ಲಿ ಫಿಲ್ಮ್‌ಫೇರ್‌ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿತ್ತು. 2008ರಲ್ಲಿ ಮಹಾರಾಷ್ಟ್ರ ಸರ್ಕಾರವು ಅತ್ಯುನ್ನತ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಜಾಕಿ ಶ್ರಾಫ್, ಮಾಧೂರಿ ದೀಕ್ಷಿತ್ ಸಹ ಸುಲೋಚನಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಚಿತ್ರರಂಗ ಕಂಡ ಅತ್ಯಂತ ವಿನಶೀಲ ಮತ್ತು ಪ್ರೀತಿಯ ನಟಿಯರಲ್ಲೊಬ್ಬರಾಗಿದ್ದರು ಎಂದು ಮಾಧುರಿ ದೀಕ್ಷಿತ್ ಕೊಂಡಾಡಿದ್ಧರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT