ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ವಿದ್ಯಾರ್ಥಿನಿ BIE ಪರೀಕ್ಷೆಯಲ್ಲಿ ಟಾಪರ್

Published 13 ಏಪ್ರಿಲ್ 2024, 10:45 IST
Last Updated 13 ಏಪ್ರಿಲ್ 2024, 10:45 IST
ಅಕ್ಷರ ಗಾತ್ರ

ಅಮರಾವತಿ: ಬಾಲ್ಯವಿವಾಹದ ಕಪಿಮುಷ್ಟಿಯಿಂದ ಪಾರಾದ ಆಂಧ್ರಪ್ರದೇಶದ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಇಂಟರ್‌ಮೀಡಿಯೇಟ್ ಬೋರ್ಡ್ ಪರೀಕ್ಷೆ (BIE)ಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾಳೆ.

'ಕರ್ನೂಲ್ ಜಿಲ್ಲೆಯ ಜಿ.ನಿರ್ಮಲಾ ಎಂಬ ವಿದ್ಯಾರ್ಥಿನಿಗೆ ಕುಟುಂಬ ಸದಸ್ಯರು ಬಲವಂತವಾಗಿ ಬಾಲ್ಯವಿವಾಹಕ್ಕೆ ಸಿದ್ಧತೆ ನಡೆಸಿದ್ದರು. ಮಾಹಿತಿ ಪಡೆದ ಜಿಲ್ಲಾಡಳಿತ ಬಾಲಕಿಯನ್ನು ರಕ್ಷಿಸಿತ್ತು. ಬಳಿಕ ಅವರು (ವಿದ್ಯಾರ್ಥಿನಿ) ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಇಂಟರ್‌ಮೀಡಿಯೇಟ್ ಬೋರ್ಡ್ ಪರೀಕ್ಷೆಯಲ್ಲಿ 440 ಕ್ಕೆ 421 ಅಂಕ ಗಳಿಸಿ ಅಗ್ರಸ್ಥಾನ ಪಡೆದಿದ್ದಾಳೆ' ಎಂದು ಇಂಟರ್‌ಮೀಡಿಯೇಟ್ ಬೋರ್ಡ್ ಕಾರ್ಯದರ್ಶಿ ಸೌರಬ್ ಗೌರ ತಿಳಿಸಿದ್ದಾರೆ.

ನಿರ್ಮಲಾ ಅವರು ಐಪಿಎಸ್ ಅಧಿಕಾರಿಯಾಗಬೇಕು ಎಂಬ ಕನಸು ಹೊತ್ತಿದ್ದಾರೆ. ಅಲ್ಲದೇ ಬಾಲ್ಯವಿವಾಹ ತಡೆಯುವುದು, ಹೆಣ್ಣುಮಕ್ಕಳು ಶಿಕ್ಷಣ ಮುಂದುವರಿಸುವಂತೆ ಪ್ರೇರೇಪಿಸುವುದು ಈಕೆಯ ಗುರಿ.

'ಬಾಲ್ಯವಿವಾಹದಂತಹ ಕ್ರೂರ ಪರಿಸ್ಥಿಯಲ್ಲಿ ಸಿಲುಕಿ ಸಂಕಟ ಅನುಭವಿಸುತ್ತಿರುವ ಎಷ್ಟೋ ಹೆಣ್ಣುಮಕ್ಕಳ ನಡುವೆ ಈ ವಿದ್ಯಾರ್ಥಿನಿಯ ಕಥೆ ಸ್ಫೂರ್ತಿದಾಯಕ' ಎನ್ನುತ್ತಾರೆ ಇಲ್ಲಿನ ಜನರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT